ಎಂ.ಭಾಸ್ಕರ ಪೈ ಗುಜ್ಜಾಡಿ ಪ್ರೌಢಶಾಲೆ ಶೌಚಾಲಯ ಧ್ವಂಸ: ಕ್ರಮಕ್ಕೆ ಆಗ್ರಹ

ಕುಂದಾಪುರ:ಗುಜ್ಜಾಡಿ ಗ್ರಾಮದ ಎಂ.ಭಾಸ್ಕರ್ ಪೈ ಸರಕಾರಿ ಪ್ರೌಢಶಾಲೆಯ ಶೌಚಾಲಯವನ್ನು ಶಾಲೆಯ ಪಕ್ಕದಲ್ಲಿದ್ದ ಖಾಸಗಿ ಜಾಗದ ಮಾಲೀಕರೊಬ್ಬರು ಶಾಲೆಗೆ ರಜೆ ಇದ್ದ ಸಂದರ್ಭ ಧ್ವಂಸ ಮಾಡಿ ನೆಲ ಸಮ ಮಾಡಿದ್ದಾರೆ ಎಂದು ಶಾಲೆಯ ಎಸ್‍ಡಿಎಂಸಿ ಸದಸ್ಯರು ದೂರಿದ್ದಾರೆ. ಸರಕಾರಿ ಶಾಲೆಗೆ ಸಂಬಂಧಿಸಿದ ಶೌಚಾಲಯವನ್ನು ಧ್ವಂಸ ಮಾಡಿದ ವ್ಯಕ್ತಿಗಳ ವಿರುದ್ಧವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರನ್ನು ನೀಡಲಾಗಿದೆ.ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು,ಹಳೆ ವಿದ್ಯಾರ್ಥಿ ಮತ್ತು ಎಸ್‍ಡಿಎಂಸಿ ಸಂಘದ ಪದಾಧಿಕಾರಿಗಳು,ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.

ಸಮುದ್ರದಲ್ಲಿ ನಾಪತ್ತೆ ಆಗಿದ್ದ ಮೀನುಗಾರರ ಶವ ಪತ್ತೆ

ಬೈಂದೂರು:ಶಿರೂರು ಅಳ್ವೆಗದ್ದೆ ಎಂಬಲ್ಲಿ ಭಾನುವಾರ ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಆಯತಪ್ಪಿ ಕಡಲಿಗೆ ಬಿದ್ದು ನಾಪತ್ತೆ ಆಗಿದ್ದ ಗಂಗೊಳ್ಳಿ ಮುಸಾಭ್ (22) ಹಾಗೂ ನಝಾನ್ (24) ಎನ್ನುವ ಯುವಕರಿಬ್ಬರ ಶವ ಸೋಮವಾರ ಮಂಜಾನೆ ಅಳ್ವೆಗದ್ದೆ ಕಡಲ ತೀರದಲ್ಲಿ ಪತ್ತೆಯಾಗಿದೆ.ಕಡಲಿನಲ್ಲಿ ನಾಪತ್ತೆ ಆಗಿದ್ದ ಯುವಕರಿಬ್ಬರ ಪತ್ತೆಗಾಗಿ ತೀವೃವಾದ ಶೋಧವನ್ನು ಮಾಡಲಾಗಿತ್ತು.ಮುಸಾಭ್ ಕಳೆದ ವಾರವಷ್ಟೆ ಭಟ್ಕಳದ ಅಂಜುಮಾನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು.ದುಬೈನಿಂದ ಊರಿಗೆ ಬಂದಿದ್ದ ನಝಾನ್:ಮೀನಿಗಾರಿಕೆ ತೆರಳಿದ್ದ ಸಂದರ್ಭ ಕಡಲಿಗೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದ ನಝಾನ್ ಅವರು ದುಬೈನ […]

ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಸಮುದ್ರದಲ್ಲಿ ನಾಪತ್ತೆ

ಬೈಂದೂರು:ಕೈರಂಪಣಿ ಮೀನುಗಾರಿಕೆಗೆ ಮಾಡಲು ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾದ ಘಟನೆ ಭಾನುವಾರ ಸಂಜೆ ಅಳ್ವೆಗದ್ದೆಯಲ್ಲಿ ನಡೆದಿದೆ.ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಭ್(22) ಹಾಗೂ ನಝಾನ್(24) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ಕಳೆದ ಹಲವು ಸಮಯದಿಂದ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ಇವರು ಭಾನುವಾರ ಸಂಜೆ ಕೂಡ ಕೈರಂಪಣಿ ಮೀನುಗಾರಿಕೆಂದು ಸಮುದ್ರಕ್ಕೆ ತೆರಳಿದ್ದರು.ಸಮುದ್ರ ಪ್ರಕ್ಷುಬ್ದಗೊಂಡಿದ್ದ ಕಾರಣ ಅಪ್ಪಳಿಸಿದ ಬಾರಿ ಅಲೆಯ ಹೊಡೆತಕ್ಕೆ ಇಬ್ಬರು ಮೀನುಗಾರರು ಆಯತಪ್ಪಿ ಕಡಲಿಗೆ ಬಿದ್ದು ನಾಪತ್ತೆ ಆಗಿದ್ದಾರೆ.ನಾಪತ್ತೆಯಾದ ಇಬ್ಬರು ಮೀನುಗಾರರಿಗಾಗಿ ಸ್ಥಳೀಯ ಮೀನುಗಾರರು […]

You cannot copy content of this page