ನಿಕ್ಷಯ್ ಮಿತ್ರ ಯೋಜನೆ ಕಿಟ್ ವಿತರಣೆ

ಕುಂದಾಪುರ:ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆ ಯೋಜನೆಯಾದ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ನಿಕ್ಷಯ್ ಮಿತ್ರ ಯೋಜನೆಡಿ ಹೊಸಾಡು ಗ್ರಾಮ ಪಂಚಾಯತ್ ವತಿಯಿಂದ ಕ್ಷಯರೋಗದಿಂದ ಬಳಲುತ್ತಿದ್ದ ಹೊಸಾಡು ಗ್ರಾಮದ ವ್ಯಕ್ತಿಗೆ ಆಹಾರದ ಕಿಟ್‍ನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಹೊಸಾಡು ಗ್ರಾಮ ಪಂಚಾಯತ್ ಪಿಡಿಒ ಪಾರ್ವತಿ,ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ ಸಿಬ್ಬಂದಿಗಳು ಹಾಗೂ ತಾಲೂಕು ಕ್ಷಯ ಘಟಕ ಬೈಂದೂರು,ಕೆಎಂಸಿ ಹಾಸ್ಪೆಟಲ್ ವೈದ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಂಚುಗೋಡು ಶಾಲೆ ಹಳೆ ವಿದ್ಯಾರ್ಥಿ ಸಂಘಕ್ಕೆ ಪ್ರಶಸ್ತಿ

ಕುಂದಾಪುರ:ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಬೈಂದೂರು ತಾಲೂಕು ವತಿಯಿಂದ ಬೈಂದೂರುನಲ್ಲಿ ಸೋಮವಾರ ನಡೆದ ಸಾಧಕ ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಸಾಧಕ ಹಳೆವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಸದಸ್ಯರಿಗೆ ಸಾಮಥ್ರ್ಯವರ್ಧನಾ ತರಬೇತಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಕೆಲಸದೊಂದಿಗೆ ಗುರುತಿಸಿಕೊಂಡಿರುವ ಹೊಸಾಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕಂಚುಗೋಡು ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಕಂಚುಗೋಡು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಸಂಘದ ಅಧ್ಯಕ್ಷ ಚೌಕಿ ಅಶೋಕ ಖಾರ್ವಿ ಪ್ರಶಸ್ತಿಯನ್ನು ಸ್ವೀಕರಿಸಿದರು.ಈ […]

ಅಕ್ರಮ ಮರಳು ಸಾಗಾಟ:ಮೂರು ಟಿಪ್ಪರ್ ವಶಕ್ಕೆ

ಉಡುಪಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಜರುಗಿಸಬೇಕೆನ್ನುವುದು ನಾಗರಿಕರ ಆಗ್ರಹವಾಗಿದೆ. ಗಂಗೊಳ್ಳಿ:ಯಾವುದೇ ರೀತಿ ಪರವಾನಾಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಭಾನುವಾರ ನಡೆದಿದೆ.ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‍ಐ ಹರೀಶ್ ಆರ್ ನಾಯ್ಕ್ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡ ಕುಂದಾಪುರ ತಾಲೂಕಿನ ಮೊವಾಡಿ ಹಾಗೂ ತ್ರಾಸಿ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಹೇರಿಕೊಂಡು ಸಾಗಾಟ ಮಾಡುತ್ತಿದ್ದ […]

You cannot copy content of this page