ಶ್ರೀವರಾಹ ದೇವರಿಗೆ ಸೀಯಾಳ ಅಭಿಷೇಕ

ಬೈಂದೂರು:ಮಳೆರಾಯ ಮುನಿಸಿಕೊಂಡಿದ್ದರಿಂದ ಭತ್ತ ಬೆಳೆಗೆ ಕಂಟಕ ಎದುರಾದ ಹಿನ್ನೆಲೆಯಲ್ಲಿ ಉತ್ತಮ ಮಳೆ ಆಗಲಿ ಎಂದು ಪ್ರಾರ್ಥಿಸಿ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಹಾ ದೇವರಿಗೆ ಮರವಂತೆ ಗ್ರಾಮಸ್ಥರು ಸಹಸೃ ಸೀಯಾಳ ಅಭಿಷೇಕವನ್ನು ಭಾನುವಾರ ನೆರವೇರಿಸಿದರು.ಈ ಸಂದರ್ಭದಲ್ಲಿ ಮರವಂತೆ ದೇವಳದ ಆಡಳಿತ ಸಮಿತಿ ಅಧ್ಯಕ್ಷರು,ಮರವಂತೆ ಗ್ರಾಮಸ್ಥರು,ಅರ್ಚಕರು,ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗಾಯನೋತ್ಸವ ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ:ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಾಥಮಿಕ ಶಿಕ್ಷಕರ ಸಂಘ ಬೈಂದೂರು ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘ ಬೈಂದೂರು ವತಿಯಿಂದ ಗಾಯನೋತ್ಸವ ಕಾರ್ಯಕ್ರಮ ನಾವುಂದ ಸ್ಕಂದಾ ಹಾಲ್‍ನಲ್ಲಿ ನಡೆಯಿತು.ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕ್ಷೇತ್ರ ಶಿಕ್ಷಣಾಕಾರಿ ನಾಗೇಶ ಉದ್ಘಾಟಿಸಿದರು.ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಯಾನಂದ ಪಟಗಾರ್,ಸಮನ್ವಯಾಕಾರಿ ಮಂಜುನಾಥ ನಾಯ್ಕ,ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಮಾದವ ಬಿಲ್ಲವ,ದಯಾನಂದ ಬಳಗಾರ್ ಉಪಸ್ಥಿತರಿದ್ದರು.ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಸುನೀಲ್ ಶೆಟ್ಟಿ ಸ್ವಾಗತಿಸಿದರು.ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘಟನಾ […]

ಆಲೂರು:-ವೈದ್ಯಕೀಯ ಚಿಕಿತ್ಸೆಗೆ,ಧನಸಹಾಯ ವಿತರಣೆ

ಕುಂದಾಪುರ:ನಿಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ನಿವಾಸಿ ಸುಮತಿ ದೇವಾಡಿಗ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಆಲೂರು-ಹರ್ಕೂರು ಗ್ರಾಮಸ್ಥರಿಂದ ಸಂಗ್ರಹಿಸಿದ 51,000.ರೂ ಅನ್ನು ಧನಸಹಾಯದ ರೂಪದಲ್ಲಿ ವಿತರಿಸಲಾಯಿತು.ಈ ಸದಂರ್ಭ ಗ್ರಾಮದ ಸಮಾನ ಮನಸ್ಕ ಸ್ವಯಂಸೇವಕರು ಉಪಸ್ಥಿತರಿದ್ದರು.

You cannot copy content of this page