ಹೆಮ್ಮಾಡಿ ಜನತಾ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ,ಗುರು ನಮನ ಕಾರ್ಯಕ್ರಮ

ಕುಂದಾಪುರ:ಶಿಕ್ಷಣ ಮತ್ತು ಸಂಸ್ಕಾರದ ಕುರಿತಾಗಿ ಸಾಕಷ್ಟು ಸ್ವಾರಸ್ಯಕರವಾಗಿರುವ ವಿಚಾರಗಳನ್ನು ಮನ ಮುಟ್ಟುವಂತೆ ವಿದ್ಯಾರ್ಥಿಗಳಿಗೆ ಜನತಾ ಕಾಲೇಜು ಶಿಕ್ಷಣ ಸಂಸ್ಥೆ ಬೋಧನೆ ಮಾಡುತ್ತಿರುವುದು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಂತೆ ಇದೆ ಎಂದು ಕಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ವಿಶ್ವನಾಥ ಶೆಟ್ಟಿ ಹೇಳಿದರು.ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಗುರು ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಆಡಳಿತ ಮಂಡಳಿ ಅಧ್ಯಕ್ಷರಾದ ಕಾಲೇಜಿನ ಪ್ರಿನ್ಸಿಪಾಲ್ […]

ನಿವೃತ್ತ ಸೈನಿಕ ದಿನೇಶ್ ಆಚಾರ್ಯರಿಗೆ ಭವ್ಯ ಸ್ವಾಗತ

ಮುಳ್ಳಿಕಟ್ಟೆ:ಭಾರತೀಯ ಭೂ ಸೇನೆಯಲ್ಲಿ ಸಿಪಾಯಿ ಹುದ್ದೆಗೆ ಸೇರಿ ಹವಾಲ್ದಾರರಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ಆ.31 ರಂದು ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಕಾಳಿಕಾಂಬಾ ನಗರದ ನಿವಾಸಿ ಶಂಕರ ಆಚಾರ್ಯ ಮತ್ತು ಸುಶೀಲ ಆಚಾರ್ಯ ದಂಪತಿಗಳ ಪುತ್ರ ನಿವೃತ್ತ ಸೇನಾ ಹವಾಲ್ದಾರ್ ದಿನೇಶ್ ಆಚಾರ್ಯ ಅವರನ್ನು ಮುಳ್ಳಿಕಟ್ಟೆಯಲ್ಲಿ ಚಂಡೆಯೊಂದಿಗೆ ಆರತಿ ಬೆಳಗಿ ಅದ್ದೂರಿಯಾಗಿ ಮಂಗಳವಾರ ಸ್ವಾಗತಿಸಿಕೊಳ್ಳಲಾಯಿತು.ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ ನಿವೃತ್ತ ಸೇನಾ ಹವಾಲ್ದಾರ್ ದಿನೇಶ್ ಆಚಾರ್ಯ […]

ಹಕ್ಲಾಡಿ:ಇಸ್ಪೀಟು ಜುಗಾರಿ ಅಡ್ಡಕ್ಕೆ ದಾಳಿ,ನಗದು ವಶ

ಕುಂದಾಪುರ:ಹಕ್ಲಾಡಿ ಗ್ರಾಮದ ಹಕ್ಕಾಡಿ ಸರಕಾರಿ ಗೇರು ಹಾಡಿಯಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿದ್ದ ಬಗ್ಗೆ ಮಾಹಿತಿ ದೊರೆತ ಮೇರೆಗೆ ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ಆರ್ ನಾಯ್ಕ್ ನೇತೃತ್ವದ ಸಿಬ್ಬಂದಿಗಳ ತಂಡ ಸ್ಥಳಕ್ಕೆ ದಾಳಿ ನಡೆಸಿ ಆಪಾದಿತರಾನ್ನು ವಶಕ್ಕೆ ಪಡೆದಿದ್ದ ಘಟನೆ ಸೋಮವಾರ ನಡೆದಿದೆ.ಕೃತ್ಯಕ್ಕೆ ಬಳಸಿದ 6,100.ರೂ ಹಾಗೂ ಇಸ್ಪೀಟ್ ಎಲೆಗಳು,ಹಸಿರು ಬಣ್ಣದ ಬೆಡ್ ಶೀಟ್ ಒಂದನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.ಈ ಸಂಬಂಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

You cannot copy content of this page