ಲಕ್ಷ್ಮೀನಾರಾಯಣ ದೇವಸ್ಥಾನ ಹೆಮ್ಮಾಡಿ,ಜೀರ್ಣೋದ್ಧಾರ ನಿಧಿ ಕುಂಭ ಸ್ಥಾಪನೆ

ಕುಂದಾಪುರ:ಹೆಮ್ಮಾಡಿ ಗ್ರಾಮದ ಗ್ರಾಮದೇವರಾದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಪ್ರಯುಕ್ತ ನಿಧಿ ಕುಂಭ ಸ್ಥಾಪನೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿ ವಿಧಾನದೊಂದಿಗೆ ಶನಿವಾರ ನಡೆಯಿತು.ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ನಿಮಿತ್ತ ಗ್ರಾಮಸ್ಥರು ನಿಧಿ ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ತಂತ್ರಿಗಳಾದ ವಿಶೇಶ್ವರ ಸೋಮಯಾಜಿ,ಪ್ರದಾನ ಅರ್ಚಕರಾದ ನರಸಿಂಹ ಮೂರ್ತಿ ಹೊಳ್ಳ,ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಅಶೋಕ್ ಕುಮಾರ್ ಭಟ್,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತ್ಯನಾರಾಯಣ ರಾವ್,ಕಾರ್ಯದರ್ಶಿ ಹರೀಶ್ ಭಂಡಾರಿ,ಸಮಿತಿ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.

ಗುಜ್ಜಾಡಿ:ಹದಗೆಟ್ಟ ಮಡಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಆಗ್ರಹ

ಕುಂದಾಪುರ:ಗಂಗೊಳ್ಳಿ ಲೈಟ್‍ಹೌಸ್ ಬಳಿಯ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಮಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಕೆಸರು ರಾಡಿಯಿಂದ ಕೂಡಿದೆ,ದುರಾವಸ್ಥೆಯಿಂದ ಕೂಡಿದ ರಸ್ತೆಯಲ್ಲಿ ಸಾಗುವುದೆ ದುಸ್ತರವಾಗಿದೆ.ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕ್ಕೆನ್ನುವ ಹಲವಾರು ವರ್ಷಗಳ ಬೇಡಿಕೆ ಮರಿಚಿಕೆ ಆಗಿ ಉಳಿದಿದ್ದು,ಮೀನುಗಾರರಿಗೆ ಅನುಕೂಲಕರವಾಗಿರುವ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ರೋಟರ್ಯಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ

ಕುಂದಾಪುರ:ಗಂಗೊಳ್ಳಿ ರೋಟರಿ ಕ್ಲಬ್ ಪ್ರಾಯೋಜಿತ ಗಂಗೊಳ್ಳಿ ರೋಟರ್ಯಾಕ್ಟ್ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಗಂಗೊಳ್ಳಿ ಸ.ವಿ.ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆಯಿತು.ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಕವಿತಾ ಎಂ.ಸಿ. ಕಾರ್ಯಕ್ರಮ ಉದ್ಘಾಟಿಸಿದರು.ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ನಾಗೇಂದ್ರ ಪೈ,ಝೋನಲ್ ರೋಟರ್ಯಾಕ್ಟ್ ಕೋ-ಆರ್ಡಿನೇಟರ್ ಸುಗುಣಾ ಆರ್.ಕೆ ಮತ್ತು ರೋಟರ್ಯಾಕ್ಟ್ ಪದಾಧಿಕಾರಿಗಳು,ನಿರ್ಗಮಿತ ಅಧ್ಯಕ್ಷೆ ಶ್ರೇಯಾ ಎಸ್ ಮತ್ತು ಕಾರ್ಯದರ್ಶಿ ಸುಹಾನಾ,ಸದಸ್ಯರು ಉಪಸ್ಥಿತರಿದ್ದರು.ರೋಟರ್ಯಾಕ್ಟ್ ಕ್ಲಬಿನ ನೂತನ ಅಧ್ಯಕ್ಷೆಯಾಗಿ ಸಿಂಚನಾ ಮತ್ತು ಕಾರ್ಯದರ್ಶಿಯಾಗಿ ಕ್ಷಮಾ ಪದಗ್ರಹಣ […]

You cannot copy content of this page