ಹೆಮ್ಮಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟನಾ ಸಮಾರಂಭ

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು,ಸಮೂಹ ಸಂಪನ್ಮೂಲ ಕೇಂದ್ರ ಹೆಮ್ಮಾಡಿ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಹೆಮ್ಮಾಡಿ ಕ್ಲಸ್ಟರ್ ಮಟ್ಟದ ಕಿರಿಯ,ಹಿರಿಯ ಮತ್ತು ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ ಶನಿವಾರ ಅದ್ದೂರಿಯಾಗಿ ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರ ಮಡಿವಾಳ ಅವರು ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ,ಪುಟ್ಟ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಲು ಪ್ರತಿಭಾ ಕಾರಂಜಿ ಅಂತಹ ಸ್ಪರ್ಧೆಗಳು ಉತ್ತಮವಾದ […]

ಸೆ.11 ರಂದು ಹೊಸಾಡು ಗ್ರಾಮ ಪಂಚಾಯತ್ ಜಮಾಬಂದಿ

ಕುಂದಾಪುರ:ಹೊಸಾಡು ಗ್ರಾಮ ಪಂಚಾಯತ್‍ನ 2022-23ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂದಿ ಕಾರ್ಯಕ್ರಮ ಸೆ.11 ರಂದು ಸೋಮವಾರ ಪೂರ್ವಾಹ್ನ ಗಂಟೆ 10 ರಿಂದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.ತಾಲೂಕು ಪಂಚಾಯತ್ ಕುಂದಾಪುರ ವ್ಯವಸ್ಥಾಪಕರಾದ ರಾಮಚಂದ್ರ ಮಯ್ಯ ಜಮಾಬಂದಿ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ.

ಕ್ರಿಶ್ಚಿಯನ್ ಬಾಂಧವರಿಂದ ತೆನೆ ಹಬ್ಬ ಆಚರಣೆ

ಕುಂದಾಪುರ:ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಮತ್ತು ತ್ರಾಸಿ ಇಗರ್ಜಿ ಹಾಗು ಪಡುಕೋಣೆ ಚರ್ಚ್,ತಲ್ಲೂರು ಚರ್ಚ್ ಸೇರಿದಂತೆ ನಾನಾ ಕಡೆಗಳಲ್ಲಿ ತೆನೆ ಹಬ್ಬ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ಚರ್ಚಿನ ಧರ್ಮಗುರುಗಳು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು,ಕ್ರಿಶ್ಚಿಯನ್ ಬಾಂಧವರು ಚರ್ಚ್‍ಗೆ ಆಗಮಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು.ಭಕ್ತರಿಗೆ ತೆನೆಯನ್ನು ವಿತರಿಸಲಾಯಿತು.

You cannot copy content of this page