ಗಂಗೊಳ್ಳಿ:ಶಿಕ್ಷಕರ ದಿನಾಚರಣೆ,ಸನ್ಮಾನ ಕಾರ್ಯಕ್ರಮ

ಕುಂದಾಪುರ:ಶ್ರೀಇಂದುಧರ ದೇವಸ್ಥಾನ ಗಂಗೊಳ್ಳಿ ಮತ್ತು ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೋಮವಾರ ನಡೆಯಿತು.ಎಸ್.ವಿ ಶಾಲೆ ಮುಖ್ಯ ಶಿಕ್ಷಕ ಜಿ.ವಿಶ್ವನಾಥ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ,ಗೋಪಾಲ ಪೂಜಾರಿ,ದೇವಸ್ಥಾನದ ಅಧ್ಯಕ್ಷ ಕೃಷ್ಣ ಜಿ.ಟಿ,ಮೊಕ್ತೇಸರರಾದ ಸಂಜೀವ ಜಿ.ಟಿ,ಭಾಗ್ಯ,ನರಸಿಂಹ ಕೆ,ಶ್ರೀಕಾಂತ ಎನ್,ಜಿ.ಈಶ್ವರ,ಮಹಿಳಾ ಸಂಘದ ಗೌರವಾಧ್ಯಕ್ಷೆ ಸರೋಜ,ಸುಶೀಲಾ,ನಾಗಿಣಿ,ನೇತ್ರಾವತಿ,ಪಾರ್ವತಿ ಉಪಸ್ಥಿತರಿದ್ದರು.ಶಿಕ್ಷಕರಾದ ಜಿ.ವಿಶ್ವನಾಥ ಭಟ್,ಲಕ್ಷ್ಮೀ ಖಾರ್ವಿ,ಮಾಲಾಶ್ರೀ,ರೇಖಾ,ಅಕ್ಷತಾ,ಮಹಾಬಲ ಆಚಾರ್ಯ,ಮಮತಾ,ದೇವು ಮಾಸ್ತರ್,ರೇಣುಕಾ ನಾಯಕ್ ಹಾಗೂ ಭೂದೇವಿ ಅವರನ್ನು ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಮತ್ತು ಇಂದುಶ್ರೀ ಮಹಿಳಾ ಸಂಘದ […]

ಹೊಸಾಡು:ವಿಶೇಷ ಚೇತನರ ಸ್ವ-ಸಾಹಯ ಸಂಘ ಉದ್ಘಾಟನೆ

ಕುಂದಾಪುರ:ಉಳಿತಾಯದ ಮನೋಭಾವವನ್ನು ಸೃಷ್ಟಿಸುವ ಸಲುವಾಗಿ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ವಿಶೇಷ ಚೇತನರ ಸ್ವಸಹಾಯ ಸಂಘಗಳನ್ನು ರಚನೆ ಮಾಡಿರುವುದು ಬಹಳಷ್ಟು ಉತ್ತಮವಾದ ಕೆಲಸವಾಗಿದೆ.ಮಾಸಿಕ ವೇತನವನ್ನು ಪಡೆದು ಕೊಳ್ಳುವ ವಿಶೇಷ ಚೇತನರರು ಕೂಡ ಒಂದಂಶ ಹಣವನ್ನು ಉಳಿತಾಯ ಮಾಡಲು ಸಹಕಾರಿ ಆಗಿದೆ ಎಂದು ಹೊಸಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾರ್ವತಿ ಹೇಳಿದರು.ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ನಡೆದ ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ಆಶ್ರಯದಲ್ಲಿ ನೂತನವಾಗಿ ರಚನೆಗೊಂಡಿರುವ ಗುರು ರಾಘವೇಂದ್ರ,ಶ್ರೀ ರಾಘವೇಂದ್ರ ಹಾಗೂ ಮಹಾಕಾಳಮ್ಮ […]

ಶ್ರೀವರಾಹ ದೇವರಿಗೆ ಸೀಯಾಳ ಅಭಿಷೇಕ

ಬೈಂದೂರು:ಮಳೆರಾಯ ಮುನಿಸಿಕೊಂಡಿದ್ದರಿಂದ ಭತ್ತ ಬೆಳೆಗೆ ಕಂಟಕ ಎದುರಾದ ಹಿನ್ನೆಲೆಯಲ್ಲಿ ಉತ್ತಮ ಮಳೆ ಆಗಲಿ ಎಂದು ಪ್ರಾರ್ಥಿಸಿ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಹಾ ದೇವರಿಗೆ ಮರವಂತೆ ಗ್ರಾಮಸ್ಥರು ಸಹಸೃ ಸೀಯಾಳ ಅಭಿಷೇಕವನ್ನು ಭಾನುವಾರ ನೆರವೇರಿಸಿದರು.ಈ ಸಂದರ್ಭದಲ್ಲಿ ಮರವಂತೆ ದೇವಳದ ಆಡಳಿತ ಸಮಿತಿ ಅಧ್ಯಕ್ಷರು,ಮರವಂತೆ ಗ್ರಾಮಸ್ಥರು,ಅರ್ಚಕರು,ಸಿಬ್ಬಂದಿಗಳು ಉಪಸ್ಥಿತರಿದ್ದರು.

You cannot copy content of this page