ನಿವೃತ್ತ ಸೈನಿಕ ದಿನೇಶ್ ಆಚಾರ್ಯರಿಗೆ ಭವ್ಯ ಸ್ವಾಗತ
ಮುಳ್ಳಿಕಟ್ಟೆ:ಭಾರತೀಯ ಭೂ ಸೇನೆಯಲ್ಲಿ ಸಿಪಾಯಿ ಹುದ್ದೆಗೆ ಸೇರಿ ಹವಾಲ್ದಾರರಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ಆ.31 ರಂದು ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಕಾಳಿಕಾಂಬಾ ನಗರದ ನಿವಾಸಿ ಶಂಕರ ಆಚಾರ್ಯ ಮತ್ತು ಸುಶೀಲ ಆಚಾರ್ಯ ದಂಪತಿಗಳ ಪುತ್ರ ನಿವೃತ್ತ ಸೇನಾ ಹವಾಲ್ದಾರ್ ದಿನೇಶ್ ಆಚಾರ್ಯ ಅವರನ್ನು ಮುಳ್ಳಿಕಟ್ಟೆಯಲ್ಲಿ ಚಂಡೆಯೊಂದಿಗೆ ಆರತಿ ಬೆಳಗಿ ಅದ್ದೂರಿಯಾಗಿ ಮಂಗಳವಾರ ಸ್ವಾಗತಿಸಿಕೊಳ್ಳಲಾಯಿತು.ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ ನಿವೃತ್ತ ಸೇನಾ ಹವಾಲ್ದಾರ್ ದಿನೇಶ್ ಆಚಾರ್ಯ […]