ತ್ರಾಸಿ ಬೀಚ್‍ನಲ್ಲಿ ಕಡಲಾಮೆ ರಕ್ಷಣೆ,ಅಧಿಕಾರಿಗಳಿಗೆ ಹಸ್ತಾಂತರ

ಕುಂದಾಪುರ:ಕೈಕಾಲು ತುಂಡಾಗಿ ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿ ತ್ರಾಸಿ ಬೀಚ್‍ನಲ್ಲಿ ಬಿದ್ದು ಹೊರಳಾಡುತ್ತಿದ್ದ ಅಪಾಯಕ್ಕೆ ಸಿಲುಕಿದ ಕಡಾಲಾಮೆಯನ್ನು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಭಾನುವಾರ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ದಿಲೀಪ್,ಸ್ಥಳೀಯ ಮೀನುಗಾರರಾದ ದಿವಾಕರ ಖಾರ್ವಿ,ರೋಶನ್ ಡಿ ಸೋಜ ತ್ರಾಸಿ ಬೀಚ್,ಅಕ್ಷಯ್ ದೇವಾಡಿಗ ತ್ರಾಸಿ ಬೀಚ್ ಮತ್ತು ಸ್ವಯಂ ಸೇವಾ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.

ಯೋಗ ತರಬೇತಿ ಕಾರ್ಯಕ್ರಮ

ಕುಂದಾಪುರ:ಹಗಲು ರಾತ್ರಿ ಎನ್ನದೆ ಸದಾ ಸಮಾಜದ ರಕ್ಷಣೆಯಲ್ಲಿ ತೊಡಗಿಕೊಳ್ಳುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಕಾರ್ಯದ ಒತ್ತಡವನ್ನು ತಗ್ಗಿಸುವ ದೃಷ್ಟಿಯಿಂದ ಯೋಗ ತರಬೇತಿ ಶಿಬಿರವನ್ನು ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಯಿತು.ಯೋಗ ಶಿಕ್ಷಕರಾದ ಸಂದೀಪ ಯೋಗ ತರಬೇತಿಯನ್ನು ನೀಡಿದರು.ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ನಾಯ್ಕ್ ಮತ್ತು ಸಿಬ್ಬಂದಿಗಳು ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ-2023 ಕಾರ್ಯಕ್ರಮ

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್,ಗಂಗೊಳ್ಳಿ ಪೊಲೀಸ್ ಠಾಣೆ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ-2023 ಕಾರ್ಯಕ್ರಮ ಗಂಗೊಳ್ಳಿ ಎಸ್.ವಿ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‍ಐ ಹರೀಶ್ ನಾಯ್ಕ್ ಅವರು ದ್ವಿಚಕ್ರ,ರಿಕ್ಷಾ,ಟ್ರ್ಯಾಕ್ಟರ್,ಬಸ್ ಹಾಗೂ ಶಾಲಾ ಬಸ್ ಚಾಲಕರಿಗೆ ಸಂಚಾರ ನಿಯಮ ಪಾಲನೆ ಮತ್ತು ಕಾನೂನಿನ ಬಗ್ಗೆ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ನಾಗೇಂದ್ರ ಪೈ ಮತ್ತು ಮಾಜಿ ಅಧ್ಯಕ್ಷ ರಾಜೇಶ್.ಎಂ.ಜಿ ಉಪಸ್ಥಿತರಿದ್ದರು.

You cannot copy content of this page