ಮಾದಕ ವಸ್ತು ಸೇವನೆಯಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಅಸ್ವಸ್ಥರಾಗುತ್ತಾರೆ

ಕುಂದಾಪುರ:ಕೆ.ಪಿ.ಎಸ್ ಕೋಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು.ಎನ್.ಆರ್.ಆಚಾರ್ಯ ಆಸ್ಪತ್ರೆಯ ಖ್ಯಾತ ಮನೋವೈದ್ಯೆ ಮಹಿಮಾ ಆಚಾರ್ಯ ಮಾತನಾಡಿ, ಮಾದಕ ವಸ್ತು ಸೇವನೆಯಿಂದ ವಿದ್ಯಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ ಅಸ್ವಸ್ತರಾಗುವುದು ಮಾತ್ರವಲ್ಲದೆ ಕುಟುಂಬ,ಸಮಾಜ,ದೇಶಕ್ಕೆ ಮಾರಕರಾಗುತ್ತಾರೆ ಎಂದರು.ಕಾಲೇಜಿನ ಪ್ರಿನ್ಸಿಪಾಲ್ ಸುಶೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಪ್ರವೀಣ್ ಸ್ವಾಗತಿಸಿದರು,ಗಣೇಶ್ ಹೆಬ್ಬಾರ್ ನಿರ್ವಹಿಸಿದರು, ಚಂದ್ರಕಲಾ ವಂದಿಸಿದರು.

ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರಕ್ಯಾಂಪಸ್ ನೇಮಕಾತಿ ಡ್ರೈವ್

ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರಕ್ಯಾಂಪಸ್ ನೇಮಕಾತಿ ಡ್ರೈವ್ ಕುಂದಾಪುರ:ಡಾ.ಬಿ.ಬಿ ಹೆಗ್ಡೆ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಐಸಿಐಸಿಐ ಬ್ಯಾಂಕ್ ವತಿಯಿಂದಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ಕಾರ್ಯಕ್ರಮ ನೆರವೇರಿತು.ಕಾಲೇಜಿನ ಪ್ರಿನ್ಸಿಪಾಲ್ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಐಸಿಐಸಿಬ್ಯಾಂಕ್ ಸಂಸ್ಥೆ ಸಿಬ್ಬಂದಿಗಳಾದ ಶ್ರೀನಿಧಿ,ಶೀತಲ್,ಉಪ ವೈಸ್ ಪ್ರಿನ್ಸಿಪಾಲ್ ಚೇತನ್ ಶೆಟ್ಟಿಕೋವಾಡಿ,ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಮಹೇಶ್ ಕುಮಾರ್ ,ರಜತ್ ಬಂಗೇರ್ಉಪಸ್ಥಿತರಿದ್ದರು.

ನೆನೆ ಗುದ್ದಿಗೆ ಬಿದ್ದಿರುವ ಸಮಗ್ರ ಒಳ ಚರಂಡಿ ಬಗ್ಗೆ ಚರ್ಚೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ನೆನೆ ಗುದ್ದಿಗೆ ಬಿದ್ದಿರುವ ಸಮಗ್ರ ಒಳಚರಂಡಿ ವಿಷಯದ ಬಗ್ಗೆ ಕುಂದಾಪುರ ಕ್ಷೇತ್ರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ನೇತೃತ್ವದಲ್ಲಿ ಕಾಮಗಾರಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಿತು.ಕರ್ನಾಟಕ ಸರ್ಕಾರ ನೀರು ಸರಬರಾಜು ಮತ್ತು ಒಳಚರಂಡಿ ನೈರ್ಮಲ್ಯ ಮಂಡಳಿಯ ಇಂಜಿನಿಯರ್ ಚಂದ್ರಶೇಖರ್ ,ರಕ್ಷಿತ್ ಕುಮಾರ್,ಪುರಸಭೆ ಮುಖ್ಯ ಅಧಿಕಾರಿ,ಪುರಸಭಾ ಇಂಜಿನಿಯರ್ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

You cannot copy content of this page