ಸಂಸದ ಬಿ.ವೈ ರಾಘವೇಂದ್ರ ಬೈಂದೂರು ಕ್ಷೇತ್ರಕ್ಕೆ ಭೇಟಿ- ಶಾಸಕರು,ಅಧಿಕಾರಿಗಳೊಂದಿಗೆ ಸಭೆ
ಬೈಂದೂರು:ಸಮಗ್ರ ಬೈಂದೂರು ಅಭಿವೃದ್ಧಿ ಕುರಿತು ಹಾಗೂ ಪ್ರಗತಿ ಪರಿಶೀಲನಾ ಸಭೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರ ನೇತೃತ್ವದಲ್ಲಿ ಶಾಸಕರ ಕಛೇರಿಯಲ್ಲಿ ಸೋಮವಾರ ನಡೆಯಿತು.ಬೈಂದೂರು ಕ್ಷೇತ್ರಕ್ಕೆ ಭೇಟಿ ನೀಡಿದ ಸಂಸದರು ಶಾಸಕರುಗಳು ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಹಾಗೂ ಮನೆ ಮನೆಗೆ ಶುದ್ದ ಕುಡಿಯುವ ನೀರಿನ ಯೋಜನೆ,ಮರವಂತೆ ಹೊರಬಂದರು ಹಾಗೂ ಗಂಗೊಳ್ಳಿ ಜಟ್ಟಿ ಅಭಿವೃದ್ಧಿ, ತ್ರಾಸಿ- ಮರವಂತೆ ಮತ್ತು ಸೋಮೇಶ್ವರ ಬೀಚ್ ಅಭಿವೃದ್ಧಿ,ಗೋಮಾಳಗಳ ಅಳತೆ ಜೊತೆಗೆ ವಿವಿಧ ಇಲಾಖೆಗಳ […]