ಗಂಗೊಳ್ಳಿ:ವಿದ್ಯಾಗಣಪತಿ ಉತ್ಸವ,ವಿದ್ಯಾರ್ಥಿ ವೇತನ ವಿತರಣೆ
ಗಂಗೊಳ್ಳಿ:ಬಿಲ್ಲವರ ಸಮಾಜ ಸೇವಾ ಸಂಘ ಗಂಗೊಳ್ಳಿ ವತಿಯಿಂದ 13ನೇ ವರ್ಷದ ವಿದ್ಯಾಗಣಪತಿ ಉತ್ಸವ,ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಶ್ರೀ ವೀರೇಶ ಮಾಂಗಲ್ಯ ಮಂದಿರ ಗಂಗೊಳ್ಳಿಯಲ್ಲಿ ಬುಧವಾರ ನಡೆಯಿತು.ಶ್ರೀ ವಿದ್ಯಾಗಣಪತಿ ದೇವರ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಆನಂದ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಸಂಘಟಣೆಗಳನ್ನು ಹುಟ್ಟು ಹಾಕುವುದು ಸುಲಭ ಮುಂದುವರೆಸಿಕೊಂಡು ಹೋಗುವುದು ಕಷ್ಟ,ಸಂಘಗಳ ಬೆಳವಣಿಗೆಗೆ ಸಮಾಜ ಬಾಂಧವರು ಕೊಡುಗೆಗಳನ್ನು ನೀಡಿದಾಗ ಮಾತ್ರ ಸಂಘವು ಸದೃಢವಾಗಿ ಬೆಳೆಯಲು ಸಾಧ್ಯವಿದೆ.ವಿದ್ಯಾರ್ಥಿಗಳನ್ನು […]























































































































































































































































































































































































































































































































































































































































































































































































































































































































































































































































































































































































































































































































































































































































































