ಹೆಮ್ಮಾಡಿ:ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಶುಕ್ರವಾರ ನಡೆಯಿತು.ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ದೇವಪ್ಪ ಪೂಜಾರಿ ಉದ್ಘಾಟಿಸಿ ಪೋಷಣ್ ಅಭಿಯಾನ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.ಸಮುದಾಯ ಆರೋಗ್ಯ ಕೇಂದ್ರ ಹೆಮ್ಮಾಡಿ ವೈದ್ಯರಾದ ವತ್ಸಲ,ಯೋಗ ಶಿಕ್ಷಕಿ ಸುಜಾತ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು.ಶಿಕ್ಷಕಿ ಸುಶೀಲ ನಿರೂಪಿಸಿದರು.ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.

ನಾವುಂದ:ಇಂಜಿನಿಯರ್ ವಿಜೇಂದ್ರ ಆಚಾರ್ಯಗೆ ಸನ್ಮಾನ

ಬೈಂದೂರು:ಸರ್.ಎಂ ವಿಶೇಶ್ವರಯ್ಯರವರ ಜನ್ಮ ಜಯಂತಿ ಪ್ರಯುಕ್ತ ನಾವುಂದ ಮೆಸ್ಕಾಂ ವಿಭಾಗದ ಜೂನಿಯರ್ ಇಂಜಿನಿಯರ್ (ಜೆ.ಇ) ವಿಜೇಂದ್ರ ಆಚಾರ್ಯ ಅವರನ್ನು ನಾವುಂದ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ ಶೆಟ್ಟಿ,ನಾವುಂದ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ,ಕ್ಲಬ್ಬಿನ ಕಾರ್ಯದರ್ಶಿ ಅಶೋಕ ವಿ ಆಚಾರ್ಯ,ಉಪಾಧ್ಯಕ್ಷ ಸಮರ ಶೆಟ್ಟಿ,ಮೆಸ್ಕಾಂ ಮೇಲ್ವಿಚಾರಕ ಅಧಿಕಾರಿ ಸುಧಾಕರ,ದಿನೇಶ್ ಆಚಾರ್ಯ,ವಿಜಯ ಶೆಟ್ಟಿ,ಪ್ರಮೋದ್ ಪೂಜಾರಿ ಉಪಸ್ಥಿತರಿದ್ದರು.

ಪಡುಕೋಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವಲಯದ ಆಶ್ರಯದಲ್ಲಿ ಪಡುಕೋಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆಯಲ್ಲಿ ನಡೆಯಿತು.ಶಾಲೆಯ ಸಂಚಾಲಕ ವಂದನೀಯ ಫ್ರಾನ್ಸಿಸ್ ಕರ್ನೇಲಿಯೊ ಅಧ್ಯಕ್ಷತೆಯನ್ನು ವಹಿಸಿದ್ದರು,ನಾಡಾ ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಉದ್ಘಾಟಿಸಿದರು.ಗ್ರಾ.ಪಂ ಸದಸ್ಯರಾದ ಸುಧಾಕರ ಶೆಟ್ಟಿ ಮತ್ತು ಜ್ಯೋತಿ,ಶಾಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ,ಗಿರಿಜಾ,ಅಚ್ಯತ್ ಬಿಲ್ಲವ,ಪ್ರಭು ಕೆನಡಿ ಪರೇರಾ,ಅಲೆಕ್ಸ್ ಆಂಟನಿ ಡಿಸೋಜಾ,ವಿನ್ಸೆಂಟ್ ಡಿಸೋಜಾ,ಫಿಲಿಪ್ […]

You cannot copy content of this page