ಸೆ.18 ರಂದು ತ್ರಾಸಿಯಲ್ಲಿ ಯೋಗ ಶಿಬಿರ ಉದ್ಘಾಟನೆ

ಕುಂದಾಪುರ:ಆರಾಧ್ಯ ಯೋಗ ಕೇಂದ್ರ ತ್ರಾಸಿ ವತಿಯಿಂದ ಕಲ್ಲಾನಿ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.18 ರಂದು ಯೋಗ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.ತ್ರಾಸಿ ಗ್ರಾ.ಪಂ ಅಧ್ಯಕ್ಷ ಮಿಥುನ್ ದೇವಾಡಿಗ ಯೋಗ ಶಿಬಿರ ಉದ್ಘಾಟಿಸಲಿದ್ದಾರೆ.

ಶಿಕ್ಷಕಿ ಶೋಭಾಗೆ ಪ್ರಶಸ್ತಿ

ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶೋಭಾ ಅವರಿಗೆ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ ದೊರೆತ್ತಿದೆ.

ಗಂಗೊಳ್ಳಿ:ಕೊಸೆಸಾಂವ್ ಸಮುದಾಯದಲ್ಲಿ ತೆನೆ ಹಬ್ಬ ಆಚರಣೆ

ಕುಂದಾಪುರ:ಗಂಗೊಳ್ಳಿ ಚರ್ಚ್‍ನ ಕೊಸೆಸಾಂವ್ ಮಾತೆಯ ಸಮುದಾಯದಲ್ಲಿ ತೆನೆ ಹಬ್ಬ ಆಚರಣೆ ಕಾರ್ಯಕ್ರಮ ಭಾನುವಾರ ನಡೆಯಿತು.ಕೊಸೆಸಾಂವ್ ಮಾತೆಯ ಸಮುದಾಯದ ಮುಖ್ಯಸ್ಥ ಜೋರ್ಜ್ ಫೆರ್ನಾಂಡಿಸ್,ಗಂಗೊಳ್ಳಿ ಚರ್ಚಿನ ಉಪಾಧ್ಯಕ್ಷ ಆಲ್ವಿನ್ ಕ್ರಾಸ್ತಾ,ಕಿರು ಕ್ರೈಸ್ತ ಸಮುದಾಯದ ಸಂಚಾಲಕಿ ಜೆಸಿಂತಾ ಡಿಸೋಜಾ,ಸಂತ ಜೋಸೆಫ್ ಸಮುದಾಯದ ಮುಖ್ಯಸ್ಥೆ ಸೆಲಿನ್ ಲೋಬೊ,ಕಾರ್ಮೆಲ್ ಕಾನ್ವೆಂಟ್‍ನ ಧರ್ಮ ಭಗಿನಿ ಜ್ಯೋತಿ ಪ್ರಿಯಾ,ಧರ್ಮ ಭಗಿನಿ ಡೊರಿನ್ ಉಪಸ್ಥಿತರಿದ್ದರು.ಮಾತೆ ಮರಿಯಮ್ಮನವರ ಮೂರ್ತಿಗೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

You cannot copy content of this page