ಜುಗಾರಿ ಅಡ್ಡಕ್ಕೆ ಪೊಲೀಸ್ ದಾಳಿ,ನಗದು ವಶಕ್ಕೆ

ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಗ್ರಾಮದ ಮೊವಾಡಿ ಸರಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳ ತಂಡ ಆಪಾದಿತರಾದ ಪ್ರಕಾಶ್ (30),ಪ್ರದೀಪ (42),ವಿಲ್ಫ್ರೆಡ್ (29),ಸಿದ್ದ (37),ಬಾಬು (60) ಎಂಬವರನ್ನು ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ.ಮೊವಾಡಿ ಸರಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು […]

ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ:ಆರೋಪಿಗಳು ವಶಕ್ಕೆ

ಕುಂದಾಪುರ:ಯಾವುದೇ ರೀತಿ ಪರವಾನಗಿ ಪಡೆಯದೆ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊವಾಡಿ ಗಂಡ್‍ಬೇರು ಸೌಪರ್ಣಿಕಾ ನದಿಯಲ್ಲಿ ತಡರಾತ್ರಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳಾದ ಆಲ್ಟನ್ ಆನಗೋಡು(42),ಉತ್ತರ ಪ್ರದೇಶ ರಾಜ್ಯದ ನಿವಾಸಿಗಳಾದ ಮೈನೇಜರ್ (30) ಮತ್ತು ದಿನೇಶ (22)ಜಿತೇಂದ್ರ ಕುಮಾರ್ (25),ಗುದ್ದು ಕುಮಾರ (20) ಎನ್ನುವ ವ್ಯಕ್ತಿಗಳನ್ನು ಗಂಗೊಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ರಾತ್ರಿ ಸಮಯದಲ್ಲಿ ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಕ್ಲಪ್ತ ಮಾಹಿತಿ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಹರೀಶ್ ಆರ್ […]

ಸಂಸದ ಬಿ.ವೈ ರಾಘವೇಂದ್ರ ಬೈಂದೂರು ಕ್ಷೇತ್ರಕ್ಕೆ ಭೇಟಿ- ಶಾಸಕರು,ಅಧಿಕಾರಿಗಳೊಂದಿಗೆ ಸಭೆ

ಬೈಂದೂರು:ಸಮಗ್ರ ಬೈಂದೂರು ಅಭಿವೃದ್ಧಿ ಕುರಿತು ಹಾಗೂ ಪ್ರಗತಿ ಪರಿಶೀಲನಾ ಸಭೆ‌ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರ ನೇತೃತ್ವದಲ್ಲಿ ಶಾಸಕರ ಕಛೇರಿಯಲ್ಲಿ ಸೋಮವಾರ ನಡೆಯಿತು.ಬೈಂದೂರು ಕ್ಷೇತ್ರಕ್ಕೆ ಭೇಟಿ ನೀಡಿದ ಸಂಸದರು ಶಾಸಕರುಗಳು ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು‌ ಹಾಗೂ ಮನೆ ಮನೆಗೆ ಶುದ್ದ ಕುಡಿಯುವ ನೀರಿನ ಯೋಜನೆ,ಮರವಂತೆ ಹೊರಬಂದರು ಹಾಗೂ ಗಂಗೊಳ್ಳಿ ಜಟ್ಟಿ ಅಭಿವೃದ್ಧಿ, ತ್ರಾಸಿ- ಮರವಂತೆ ಮತ್ತು ಸೋಮೇಶ್ವರ ಬೀಚ್ ಅಭಿವೃದ್ಧಿ,ಗೋಮಾಳಗಳ ಅಳತೆ ಜೊತೆಗೆ ವಿವಿಧ ಇಲಾಖೆಗಳ […]

You cannot copy content of this page