ಆಲೂರು ಹರ್ಕೂರು 30ನೇ ವರ್ಷದ ಗಣೇಶೋತ್ಸವ ಸಮಾರಂಭ
ಕುಂದಾಪುರ:ಆಲೂರು – ಹರ್ಕೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 30ನೇ ವರ್ಷದ ಗಣೇಶೋತ್ಸವ ಆಚರಣೆ ವಿಜೃಂಭಣೆಯಿಂದ ನಡೆಯಿತು.ವರ್ಷಂಪ್ರತಿ ನಡೆದು ಬಂದಂತೆ ಈ ವರ್ಷವೂ ಕೂಡ ಗಣೇಶನ ವಿಗ್ರಹವನ್ನು ಆಲೂರು ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆಮೂರು ದಿನಗಳ ಕಾಲ ಪೂಜಿಸಿ ಗುರುವಾರದಂದು ಸೌಪರ್ಣಿಕಾ ನದಿಯಲ್ಲಿ ಗಣೇಶ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು.ಉತ್ಸವದಂತೆ ಆಚರಣೆಗೊಳ್ಳುವ ಗಣೇಶೋತ್ಸವ ಕಾರ್ಯಕ್ರಮ ಆಲೂರು ಹರ್ಕೂರು ಗ್ರಾಮಸ್ಥರ ಒಗ್ಗೂಡುವಿಕೆಯಿಂದ ನಡೆಯುವುದು ವಿಶೇಷವಾಗಿದೆ.ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಮಹಾ ಅನ್ನಸಂತರ್ಪಣೆ .ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಂದ […]