ವನಮಹೋತ್ಸವ ಕಾರ್ಯಕ್ರಮ ಆಚರಣೆ

ಕುಂದಾಪುರ:ಲಯನ್ಸ್ ಕ್ಲಬ್ ನಾವುಂದ ವತಿಯಿಂದ ಜೈನ ಜೆಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಗಿಡಗಳನ್ನು ನೆಡುವುದರ ಮುಖೇನ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಲಯನ್ ವಲಯಾಧ್ಯಕ್ಷ ಜಗದೀಶ್ ಶೆಟ್ಟಿ ಕುದ್ರುಕೋಡು,ನಾವುಂದ ಕ್ಲಬ್ಬಿನ ಅಧ್ಯಕ್ಷ ಪ್ರದೀಪ ಶೆಟ್ಟಿ,ಕಾರ್ಯದರ್ಶಿ ಅಶೋಕ ವಿ ಆಚಾರ್ಯ,ಕೋಶಾಧಿಕಾರಿ ರಮೇಶ್ ಮೊಗವೀರ,ಮಾಜಿ ಅಧ್ಯಕ್ಷ ನರಸಿಂಹ ದೇವಾಡಿಗ,ಉಪಾಧ್ಯಕ್ಷ ಸಮರ ಶೆಟ್ಟಿ,ರಾಜು ದೇವಾಡಿಗ,ಪ್ರಮೋದ್ ಪೂಜಾರಿ ಉಪಸ್ಥಿತರಿದ್ದರು.

ಹಳ್ಳದಂತಾದ ರಾಷ್ಟ್ರೀಯ ಹೆದ್ದಾರಿ:ವಾಹನ ಸವಾರರಿಗೆ ಸಂಕಷ್ಟ

ಮಂಗಳೂರು:ನಿರಂತರವಾಗಿ ಸುರಿದ ಭಾರಿ ಮಳೆಗೆ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಕೆಳಗಿನ ಪೇಟೆಯ ರಸ್ತೆಯಲ್ಲಿ ಮಳೆ ನೀರು ಎರಡು ಅಡಿಯಷ್ಟು ಹರಿದು ರಸ್ತೆ ತೋಡಿನಂತಾಗಿದೆ.ರಸ್ತೆಯಲ್ಲಿ ಮೊಣಕಾಲು ಗಂಟಿನಷ್ಟು ನೀರು ತುಂಬಿ ಕೊಂಡಿದ್ದರಿಂದ ವಾಹನ ಸವಾರರು ಭಾರಿ ಸಮಸ್ಯೆ ಎದುರಿಸಿದರು.ಕಳೆದ ತಿಂಗಳು ಕೂಡ ಇಲ್ಲಿ ಇದೇ ಸ್ಥಿತಿ ನಿರ್ಮಾಣವಾಗಿ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅರೆ ಬರೆ ಕಾಮಗಾರಿ ನಿರ್ವಹಿಸಲಾಗಿತ್ತು.ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ,ಗಿಡಗಂಟಿಗಳನ್ನು ತೆರವು ಮಾಡದೆ ಇರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮರವಂತೆ:ಶ್ರೀ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ-ಆಗಸ್ಟ್.16 ಕ್ಕೆ

ಕುಂದಾಪುರ:ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್.16 ರಂದು ಸಂಪ್ರದಾಯ ಬದ್ಧವಾಗಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಮರವಂತೆ ಶ್ರೀ ಮಹಾರಾಜ ಸ್ವಾಮಿ,ಶ್ರೀ ವರಾಹ ದೇವಸ್ಥಾನದಲ್ಲಿ ಈ ಬಾರಿಯ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಜುಲೈ.17 ರಂದು ನಡೆಯಲಿದೆ ಎಂದು ಕೆಲವು ಕ್ಯಾಲೆಂಡರ್‍ಗಳಲ್ಲಿ ತಪ್ಪಾಗಿ ನಮೂದಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಯಾಗಿತ್ತು.ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ದೇವಳದ ಆಡಳಿತ ಸಮಿತಿ […]

You cannot copy content of this page