ಕಟ್‍ಬೇಲ್ತೂರು:ವಿದ್ಯುತ್ ಸ್ಪರ್ಶಿಸಿ ದಂತಿಗಳಿಬ್ಬರು ದಾರುಣ ಸಾವು

ಕುಂದಾಪುರ:ತುಂಡಾಗಿ ನೆಲಕ್ಕೆ ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ದಂಪತಿಗಳಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕಟ್‍ಬೇಲ್ತೂರು ಗ್ರಾಮದ ಸುಳ್ಸೆ ಎಂಬಲ್ಲಿ ಶುಕ್ರವಾರ ನಡೆದಿದೆ.ಮಹಾಬಲ ದೇವಾಡಿಗ (55) ಅವರ ಪತ್ನಿ ಲಕ್ಷ್ಮೀ ದೇವಾಡಿಗ (47) ಸಾವನ್ನಪ್ಪಿದ ದುರ್ದೈವಿಗಳು.ಶುಕ್ರವಾರ ಮಧ್ಯಾಹ್ನ 3.30 ರ ಸುಮಾರಿಗೆ ಮಹಾಬಲ ದೇವಾಡಿಗ ಮತ್ತು ಅವರ ಪತ್ನಿ ಲಕ್ಷ್ಮೀ ದೇವಾಡಿಗ ಎನ್ನುವವರು ಕೆಲಸವನ್ನು ಮುಗಿಸಿಕೊಂಡು ತೆರಳುತ್ತಿರುವ ಸಂದರ್ಭ ಸುಳ್ಸೆ ಕರ್ಣಿಕರ ಮನೆ ಸಮೀಪ ಕಾಲು ದಾರಿಯಲ್ಲಿ ವಿದ್ಯುತ್ ಕಂಬದಿಂದ ಲೈನ್ ತುಂಡಾಗಿ ಕೇಳಕ್ಕೆ […]

ನಾವುಂದ:ಈದ್ ಮಿಲಾದ್ ಆಚರಣೆ

ಬೈಂದೂರು:ತಾಲೂಕಿನ ಮರವಂತೆ-ನಾವುಂದದಲ್ಲಿ ಮೊಹಿದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬ ಗುರುವಾರ ನಡೆಯಿತು.ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ನಡೆಸಿದರು.ಈ ಸಂದರ್ಭ ಮುಸ್ಲಿ ಸಮುದಾಯದ ಗುರುಗಳು,ಮುಖಂಡರುಗಳು ಉಪಸ್ಥಿತರಿದ್ದರು.

ಗಂಗೊಳ್ಳಿ:ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ

ಗಂಗೊಳ್ಳಿ:ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಗುರುವಾರ ಆಚರಣೆ ಮಾಡಿದರು.ಗಂಗೊಳ್ಳಿ ಜುಮ್ಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಸೀದಿ ಯಿಂದ ಗಂಗೊಳ್ಳಿ ಲಾಸ್ಟ್ ಬಸ್‍ಸ್ಟ್ಯಾಂಡ್ ತನಕ ಪಾದಯಾತ್ರೆ ನಡೆಯಿತು.ಈ ಸಂದರ್ಭ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

You cannot copy content of this page