ಅಶಕ್ತ ಕುಟುಂಬಗಳಿಗೆ ಕಿಟ್,ಧನಸಾಹಯ ವಿತರಣೆ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೈಲು 5.ಸೆಂಟ್ಸ್ ಕಾಲೋನಿಯಲ್ಲಿ ಒಂಟಿಯಾಗಿ ಬದುಕುತ್ತಿರುವ ಅನಾಥ ಅಜ್ಜಿ ಚೆಂದು ಪೂಜಾರ್ತಿ (75) ಹಾಗೂ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರು ಕೊಡೇರಿ ನಿವಾಸಿ ಅನಾರೋಗ್ಯದಿಂದ ಬದುಕನ್ನು ಸಾಗಿಸುತ್ತಿರುವ ಅಶಕ್ತ ಅಜ್ಜಿ ಚೆನ್ನಮ ಖಾರ್ವಿ (85) ಅವರಿಗೆ ಆಹಾರದ ಸಾಮಾಗ್ರಿ ಕಿಟ್,ಉತ್ತಮ ದರ್ಜೆಯ ಬೆಡ್ ಶೀಟ್ ಹಾಗೂ ಧನಸಹಾಯವನ್ನು ಅನ್ನಪೂರ್ಣ ಸೇವಾ ಬಂಧು ಟ್ರಸ್ಟ್ ವತಿಯಿಂದ ವಿತರಿಸಲಾಯಿತು.ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರಾದ ಸಮಾಜ ಸೇವಕ ಸಾಯಿನಾಥ್ ಶೆಟ್ […]

ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ

ಕುಂದಾಪುರ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿಸಿ ಟ್ರಸ್ಟ್ ಬೈಂದೂರು ತಾಲೂಕು ಹಾಗೂ ಪಡುಕೋಣೆ ವಲಯದ ವಿಪತ್ತು ನಿರ್ವಹಣಾ ತಂಡದ ಸದಸ್ಯರ ವತಿಯಿಂದ ನಾಡ ಗ್ರಾಮ ಪಂಚಾಯತ್ ನಿಂದ ಪಡುಕೋಣೆ ಶಾಲೆ ವರೆಗಿನ ಮುಖ್ಯ ರಸ್ತೆಯಲ್ಲಿ ಬಾಯಿ ತೆರೆದು ನಿಂತ ಹೊಂಡಗಳನ್ನು ಮುಚ್ಚಿ ರಸ್ತೆಯ ಎರಡು ಬದಿಗಳಲ್ಲ್ಲಿ ಬೆಳದಿರುವ ಗಿಡ ಗಂಟಿಗಳನ್ನು ಕಡಿದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.ಮೇಲ್ವಿಚಾರಕಿ ಪಾರ್ವತಿ,ಸೇವಾ ಪ್ರತಿನಿಧಿ ಸವಿತಾ,ಮಾಜಿ ವಲಯಾಧ್ಯಕ್ಷ ವೀಣಾ ಆಚಾರಿ,ಘಟಕದ ಪ್ರತಿನಿಧಿ ಮಂಜುನಾಥ್ ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.

ತ್ರಾಸಿ ಇಗರ್ಜಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಣೆ

ಕುಂದಾಪುರ:ತ್ರಾಸಿ ಚರ್ಚ್ ಕಥೊಲಿಕ್ ಸಭಾ,ಸ್ಪೂರ್ತಿ ಸ್ತ್ರೀ ಸಂಘಟನೆ,ವೈ.ಸಿ.ಎಸ್ ಹಾಗೂ ಪರಿಸರ ಆಯೋಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ತ್ರಾಸಿ ಇಗರ್ಜಿಯಲ್ಲಿ ಆಚರಿಸಲಾಯಿತು.ತ್ರಾಸಿ ಚರ್ಚಿನ ಧರ್ಮಗುರು ವಂದನೀಯ ಫಾದರ್ ರೊಸಾರಿಯೊ ಫೆರ್ನಾಂಡಿಸ್ ಅವರು ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ಮಾರ್ಕ್‍ಡಿ ಅಲ್ಮೇಡಾ,20 ಆಯೋಗಗಳ ಸಂಯೋಜಕಿ ಮೋಲಿ ಡಿಸೋಜಾ,ಕಥೊಲಿಕ್ ಸಭಾದ ಅಧ್ಯಕ್ಷ ಜಾನ್ ರೊನಾಲ್ಡ್ ಅಲ್ಮೇಡಾ,ಸ್ತ್ರೀ ಸಂಘಟನೆ ಅಧ್ಯಕ್ಷೆ ವೀಣಾ ಮೊಂತೇರೊ,ಪರಿಸರ ಆಯೋಗದ ಸಂಚಾಲಕಿ ಡೊರತಿ ಲುವಿಸ್,ವೈ.ಸಿ.ಎಸ್ ಸಂಚಾಲಕಿ ವಿನೀತ […]

You cannot copy content of this page