ಕೊಲ್ಲೂರು:ಮಾನಸಿಕ ಅಸ್ವಸ್ಥ,ಮೂಕ ಯುವಕನ ರಕ್ಷಣೆ
ಕುಂದಾಪುರ:ಉಡುಪಿ ಜಿಲ್ಲೆಯ ಬೈಂದೂರು ವೃತ್ತದ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ತೊಂದರೆಯನ್ನು ನೀಡುತ್ತಿದ್ದ ಮಾನಸಿಕ ಅಸ್ವಸ್ಥ,ಮೂಕ ಯುವಕನನ್ನು ಕೊಲ್ಲೂರು ಪೊಲೀಸರ ವಿನಂತಿ ಮೇರೆಗೆ ಗಂಗೊಳ್ಳಿಯ ಆಪತ್ಭಾಂದವ ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಅವರು ಕೊಲ್ಲೂರಿಗೆ ತೆರಳಿ ತನ್ನ ಆಂಬ್ಯುಲೆನ್ಸ್ ಮೂಲಕ ಯುವಕನನ್ನು ಕೇರಳ ರಾಜ್ಯದ ಸ್ನೇಹಾಲಯ ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.ಸ್ನೇಹಾಲಯ ಮುಖ್ಯಸ್ಥರಾದ ಜೋಸೆಫ್ ಕ್ರಾಸ್ತಾ ಅವರು ವರು ಯುವಕನನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಆತ್ಮೀಯವಾಗಿ ಬರಮಾಡಿಕೊಂಡು ಆಶ್ರಯ ನೀಡಿದರು.ಕೊಲ್ಲೂರು […]