ಗಂಗೊಳ್ಳಿ:ಶ್ರೀ ವೀರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ
ಕುಂದಾಪುರ:ಗಂಗೊಳ್ಳಿ-ಕುಂದಾಪುರ ನಡುವೆ ಸಂಪರ್ಕ ಸೇತುವೆ ನಿರ್ಮಾಣ ಶೀಘೃ ಆಗಬೇಕೆಂದು ಸೇತುವೆ ಹೋರಾಟ ಸಮಿತಿ ವತಿಯಿಂದ ಗಂಗೊಳ್ಳಿ ಶ್ರೀವೀರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಉಮಾನಾಥ ದೇವಾಡಿಗ ಮಾತನಾಡಿ,ಗಂಗೊಳ್ಳಿ ಜನತೆಯ ಬಹು ಕಾಲದ ಬೇಡಿಕೆ ಇನ್ನೂ ಕೂಡ ಕನಸಾಗಿಯೇ ಉಳಿದಿದೆ.ಗಂಗೊಳ್ಳಿ-ಕುಂದಾಪುರ ನಡುವೆ ಪಂಚಗಂಗಾವಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದರೆ ವ್ಯಾಪಾರ ವಹಿವಾಟುಗಳು ವೃದ್ಧಿ ಆಗುವುದ ಜತೆಗೆ ಗ್ರಾಮದ ಜನರಿಗೆ ಬಹಳಷ್ಟು ಅನುಕೂಲ ವಾಗಲಿದೆ ಎಂದರು.ಸೇತುವೆ ನಿರ್ಮಾಣ ಕಾರ್ಯದ ಬಗ್ಗೆ ಜನಪ್ರತಿನಿಧಿಗಳು […]