ನಾಡ:ಅ.10 ರಂದು ಚಲೋ ಸೇನಾಪುರ ಪ್ರತಿಭಟನಾ ಮೆರವಣಿಗೆ

ಕುಂದಾಪುರ:ತಾಲೂಕಿನ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ವರ್ಗದ ಪ್ರಮುಖ ಎಕ್ಸ್‍ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ವತಿಯಿಂದ ಅ.10 ಮಂಗಳವಾರ ದಂದು ಬೆಳಿಗ್ಗೆ 10 ಗಂಟೆ ಯಿಂದ ನಾಡ ಗ್ರಾಮ ಪಂಚಾಯತ್ ಬಳಿಯಿಂದ ಸೇನಾಪುರ ರೈಲು ನಿಲ್ದಾಣದ ವರೆಗೆ ಚಲೋ ಸೇನಾಪುರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.ಕುಂದಾಪುರ ತಾಲೂಕಿನ ಸೇನಾಪುರ ರೈಲು ನಿಲ್ದಾಣದಲ್ಲಿ ಮೂರು ರೈಲ್ವೆ ಟ್ರ್ಯಾಕ್‍ಗಳಿದ್ದು,ಎಲ್ಲಾ ರೀತಿಯ ಎಕ್ಸ್‍ಪ್ರೆಸ್ ರೈಲು ನಿಲುಗಡೆಗೆ ಎಲ್ಲಾ ರೀತಿಯ ವ್ಯವಸ್ಥೆಗಳಿವೆ.ಆದರೆ ಲೋಕಲ್ ರೈಲುಗಳು ಮಾತ್ರ […]

ದೇವಾಡಿಗ ನವೋದಯ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಬೆಂಗಳೂರು:ದೇವಾಡಿಗ ನವೋದಯ ಸಂಘದ ವಾರ್ಷಿಕ ಮಹಾಸಭೆ ಇತ್ತೀಚಿಗಷ್ಟೇ ಬೆಂಗಳೂರಿನ ಶ್ರೀನಿಧೀ ಲೇಔಟ್ ವೆಲ್ ಫೇರ್ ಅಸೋಸಿಯೇಷನ್ ಸಭಾಭವನದಲ್ಲಿ ನಡೆಯಿತು.ಬೆಂಗಳೂರು ದೇವಾಡಿಗ ನವೋದಯ ಸಂಘದ ಅಧ್ಯಕ್ಷ ಬಿ.ಆರ್ ದೇವಾಡಿಗ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ದೇವಾಡಿಗ ಸಂಘದ 2019-23ರ ಸಾಲಿನ ಕಾರ್ಯಕ್ರಮಗಳ ವರದಿ ವಾಚಿಸಿದರು. ಸಂಘದ ಕೋಶಾಧಿಕಾರಿ ಮಂಜುನಾಥ ದೇವಾಡಿಗ ಸಂಘ 2019-23ರ ಸಾಲಿನ ಆಯವ್ಯಯಗಳ ವರದಿ ವಾಚಿಸಿದರು. ದೇವಾಡಿಗ ನವೋದಯ ಸಂಘ ರಿ ಬೆಂಗಳೂರು ಇದರ 2023-2025ರ ನೂತನ ಕೋರ್ ಕಮಿಟಿ […]

ಹೆಮ್ಮಾಡಿ ಜನತಾ ಕಾಲೇಜಿನಲ್ಲಿ:ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ಜಯಂತಿ ಆಚರಣೆ

ಕುಂದಾಪುರ:ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ಪ್ರೌಢ ಶಾಲೆ ಅವರ ಜಂಟಿ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ಜಯಂತಿಯನ್ನು ಆಚರಿಸಲಾಯಿತು.ಕಾಲೇಜು ಹಾಗೂ ಪ್ರೌಢಶಾಲೆಯ ಸಿಬ್ಬಂದಿಗಳು ಗಾಂಧೀಜಿ ಹಾಗೂ ಶಾಸ್ತ್ರೀಯವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ಗಣೇಶ ಮೊಗವೀರ ಅವರು ಗಾಂಧೀಜಿ ಹಾಗೂ ಶಾಸ್ತ್ರೀಯವರ ಜೀವನ ಹಾಗೂ ತತ್ವಾದರ್ಶಗಳ ಕುರಿತು ಮಾತನಾಡಿದರು.ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಕಾಳವರ ಅವರು ಸ್ವಾಗತಿಸಿ ವಂದಿಸಿದರು.ಕಾಲೇಜಿನ ಬೋಧಕ,ಬೋಧಕೇತರ ವೃಂದದವರು,ಪ್ರೌಢಶಾಲಾ ಶಿಕ್ಷಕ/ಶಿಕ್ಷಕೇತರ […]

You cannot copy content of this page