ಬೆಂಗಳೂರು:ಮೀನುಗಾರರ ಮುಖಂಡರ ವಿಶೇಷ ಸಭೆ

ಕುಂದಾಪುರ:ಬಂದರು ಮತ್ತು ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಕರಾವಳಿ ಭಾಗದ ಮೀನುಗಾರರ ಮುಖಂಡರ ವಿಶೇಷ ಸಭೆಯು ಬೆಂಗಳೂರು ಕುಮಾರ ಕೃಪಾದಲ್ಲಿ ಗುರುವಾರ ನಡೆಯಿತು.ಗಂಗೊಳ್ಳಿ ಬಂದರು ಜಟ್ಟಿ ದುರಸ್ತಿ ಹಾಗೂ ಮಹಿಳಾ ಮೀನುಗಾರರ ವಿಶ್ರಾಂತಿ ಕೊಠಡಿ ನಿರ್ಮಾಣದ ಕುರಿತು ಮತ್ತು ಹರಾಜು ಪ್ರಾಂಗಣದ ಅಭಿವೃದ್ಧಿ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಯಿತು.ನಾಡದೋಣಿ ಮೀನುಗಾರರ ಸೀಮೆಎಣ್ಣೆ ಸಬ್ಸಿಡಿ ಹೆಚ್ಚಳಕ್ಕೆ ಮನವಿಯನ್ನು ನೀಡಲಾಯಿತು.ಮೀನುಗಾರರ ನಾನಾ ಸಮಸ್ಯೆಗಳನ್ನು ಚರ್ಚಿಸಲಾಯಿತು.ಈ ಸಂದರ್ಭ ಉಡುಪಿ ಶಾಸಕ ಯಶಪಾಲ್ ಸುವರ್ಣ,ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಗಳು,ನಿರ್ದೇಶಕರು,ಗಂಗೊಳ್ಳಿ ಪ್ರಾಥಮಿಕ ಮೀನುಗಾರ […]

ಬಾಡಿ ಬಿಲ್ಡಿಂಗ್ ಸ್ಪರ್ಧೆ: ಸೋಮಶೇಖರ್ ಖಾರ್ವಿಗೆ ಪ್ರಥಮ ಸ್ಥಾನ

ಕುಂದಾಪುರ:ದಸರಾ ಹಬ್ಬದ ಪ್ರಯುಕ್ತ ಮೈಸೂರು ನಲ್ಲಿ ನಡೆದ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ಮಿಸ್ಟರ್ ಸೋಮಶೇಖರ್ ಖಾರ್ವಿ ಅವರು 65ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಗುಜ್ಜಾಡಿ:ಇಂಗ್ಲಿಷ್ ವ್ಯಾಕರಣ ತರಬೇತಿ ಶಿಬಿರ ಉದ್ಘಾಟನೆ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಯ ವಿದ್ಯಾಥಿಗಳಿಗಾಗಿ ಆಯೋಜಿಸಿದ ಇಂಗ್ಲಿಷ್ ವ್ಯಾಕರಣ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆಯನ್ನು ನೀಡಲಾಯಿತು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಶಾಲೆಯ ಹಿರಿಯ ಹಳೆ ವಿದ್ಯಾರ್ಥಿಗಳಾದ ಸುಕ್ರ ಪೂಜಾರಿ ಹಾಗೂ ಮುತ್ತಯ್ಯ ಆಚಾರ್ಯ ಅವರು ಜಂಟಿಯಾಗಿ ಶಿಬಿರವನ್ನು ಉದ್ಘಾಟಿಸಿದರು.ಶಾಲೆ ಮುಖ್ಯೋಪಾಧ್ಯಾಯರಾದ ಗಂಗಾಧರ ಬಂಟ,ಎಸ್‍ಡಿಎಂಸಿ ಉಪಾದ್ಯಕ್ಷೆ ಗಾಯತ್ರಿ ಕೊಡಂಚ,ತರಬೇತುದಾರ ಸುರೇಶ ಕಾಮತ್,ಗ್ರಾ.ಪಂ ಸದಸ್ಯರಾದ ಹರೀಶ ಮೇಸ್ತ,ತುಂಗ ಪೂಜಾರಿ,ಸಂಘದ ಗೌರವಾಧ್ಯಕ್ಷ ಎಆರ್ ವಲಿಯುಲ್ಲ,ಕಾರ್ಯದರ್ಶಿ ರಾಗಘವೇಂದ್ರ […]

You cannot copy content of this page