ಶ್ರೀಗುಹೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆ

ಕುಂದಾಪುರ:ಸಾವಿರಾರು ವರ್ಷಗಳ ಕಾಲ ಇತಿಹಾಸವನ್ನು ಹೊಂದಿರುವ ಕುಂದಾಪುರ ತಾಲೂಕಿನ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದ ಪ್ರಯುಕ್ತ ಅಷ್ಟಮಂಗಳ ಪ್ರಶ್ನೆ ಚಿಂತನಾ ಕಾರ್ಯಕ್ರಮ ಕೇರಳದ ಪ್ರಸಿದ್ಧ ದೈವಜ್ಞರಾದ ಶ್ರೀ ನಾರಾಯಣ ನಂಬೂದಿರಿ ಕೈಮುಕ್ಕು ಅವರ ಮಾರ್ಗದರ್ಶನದಲ್ಲಿ ದೇವರ ಸನ್ನಿಧಾನದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು. ತಂತ್ರಿಗಳಾದ ಕುಮಾರು ಗುರು ಕೊರಂಗ್ರಪಾಡಿ,ಶ್ರೀಶ ಭಟ್ ಹೊಸಾಡು ಮತ್ತು ಇತರ ದೈವಜ್ಞರು ಸಹಕರಿಸಿದರು,ದೇವಳದ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.ಭಾನುವಾರ ಆರಂಭಗೊಂಡ ಅಷ್ಟಮಂಗಳ ಪ್ರಶ್ನೆ […]

ಅವಕಾಶಗಳನ್ನು ಬಳಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣ:ಡಾ.ಹೆಚ್.ಎಸ್ ಶೆಟ್ಟಿ

ಕುಂದಾಪುರ:ಗಂಗೊಳ್ಳಿ ಬಂದರಿನ ಅಭಿವೃದ್ಧಿಯನ್ನು ಕಡೆಗಣಿಸಿದ್ದರಿಂದ ಅವಕಾಶಗಳನ್ನು ಬಳಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಸಂಪನ್ಮೂಲವನ್ನು ಬಳಸಿಕೊಂಡು ಬೈಂದೂರು ಕ್ಷೇತ್ರದಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಗೊಂಡರೆ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ದೊರಕುದರ ಜತೆಗೆ ವಲಸೆ ಪರ್ವಕ್ಕೆ ನಿಯಂತ್ರಣ ಹೇರಿದಂತೆ ಆಗುತ್ತದೆ ಎಂದು ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಹೇಳಿದರು.ತ್ರಾಸಿ ಕೊಂಕಣ ಖಾರ್ವಿ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭ,300 ಟ್ರೀಸ್ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಮೃದ್ಧ ಬೈಂದೂರು ಅನಾವರಣ ಕಾರ್ಯಕ್ರಮದಲ್ಲಿ ಅಭಿನಂದನಾ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ದೇಶ,ಸಮಾಜ ಕಟ್ಟಬೇಕಾದರೆ ಮಾತ್ರ ಭಾಷೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು […]

ನಾಡ:ಶ್ರೀಗಣಪತಿ ದೇವರ ವಿಸರ್ಜನಾ ಮೆರವಣಿಗೆ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮದ ಕೋಣ್ಕಿ ಶ್ರೀಯೋಗಿ ರಾಜ್ ನಾರಾಯಣ ವಿಠಲ ಅವರ ಮನೆಯಲ್ಲಿ ಗಣೇಶ ಚೌತಿ ದಿನದಂದು ಪ್ರತಿಷ್ಠಾಪಿಸಲ್ಪಟ್ಟ ಗಣಪತಿ ದೇವರ ಮೂರ್ತಿಯನ್ನು 21 ದಿನಗಳ ಕಾಲ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಿಸಿ ಭಾನುವಾರ ಭವ್ಯ ಮೆರವಣಿಗೆ ಮೂಲಕ ಸೌಪರ್ಣಿಕಾ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು.

You cannot copy content of this page