ಗೂಡ್ಸ್ ರೈಲಿಗೆ ಬೆಂಕಿ,ತಪ್ಪಿದ ಬಾರಿ ದೊಡ್ಡ ಅನಾಹುತ
ಕುಂದಾಪುರ:ತಿಂಡಿ ತಿನಿಸುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿಗೆ ಬೆಂಕಿ ತಗುಲಿದ ಪರಿಣಾಮ ವಸ್ತುಗಳು ಸುಟ್ಟು ಹೋದ ಘಟನೆ ಬಿಜೂರು ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.ಅ.9 ರಂದು ಮುಂಬೈ ಕೋಲಾಡ್ ನಿಂದ ಮಂಗಳೂರು ಸುರತ್ಕಲ್ ಕಡೆಗೆ ಲಾರಿಗಳನ್ನು ಹೊತ್ತು ಸಾಗುತ್ತಿದ್ದ ಗೂಡ್ಸ್ ರೈಲಿನಲ್ಲಿ,ಬೈಂದೂರು ತಾಲೂಕಿನ ಬಿಜೂರು ರೈಲ್ವೆ ನಿಲ್ದಾಣದ ಸಮೀಪ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಲಾರಿಯೊಂದರಲ್ಲಿ ಬೆಂಕಿ ಹೊತ್ತಿಕೊಂಡು ಇರುವುದನ್ನು ನೋಡಿದ ಸಿಬಂದಿ ತಕ್ಷಣ ಗೂಡ್ಸ್ ರೈಲು ನಿಲ್ಲಿಸಿ ಬೆಂಕಿ ಆರಿಸಲು ಪ್ರಯತ್ನಿಸಿದ್ದರು.ಬೈಂದೂರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ […]