ಧನ್ವಿ ಮರವಂತೆಗೆ ಅಂತರಾಜ್ಯ ಯುವ ಪ್ರತಿಭಾ ಪ್ರಶಸ್ತಿ

ಬೈಂದೂರು:ಕಾಸರಗೋಡು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವಿಶಂತಿ ವರ್ಷಚಾರಣೆ ಅಂಗವಾಗಿ ನಡೆದ ಗ್ರಂಥಾಲಯ ಯುವ ಪ್ರತಿಭಾ ಪುರಸ್ಕಾರ ಭರವಸೆಯ ಬೆಳಕು 2023 ರ ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆ ಧನ್ವಿ ಮರವಂತೆ ಅವರಿಗೆ ಅಂತರಾಜ್ಯ ಯುವ ಪ್ರತಿಭಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ತ್ರಾಸಿ ಡಾನ್ ಬೇಸ್ಕೊ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ.

ಕರಾಟೆ ಸ್ಪರ್ಧೆಯಲ್ಲಿ,ಯಶವಂತ ಖಾರ್ವಿಗೆ ಪ್ರಥಮ ಸ್ಥಾನ

ಭಟ್ಕಳ:ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ಬೀನಾ ವೈದ್ಯಾ ಪಿ.ಯು ಕಾಲೇಜಿನ ವಿದ್ಯಾರ್ಥಿ,ಮುಳುಗುಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಲೈಟ್‍ಹೌಸ್ ಅವರ ಮಗ ಯಶವಂತ ಖಾರ್ವಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಅ.7 ರಂದು ಶ್ರೀಗುಹೇಶ್ವರ ದೇವಳದಲ್ಲಿ ಅಷ್ಟಮಂಗಲ ಪ್ರಶ್ನೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿರುವ ಶ್ರೀ ಗುಹೇಶ್ವರ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸವನ್ನುಳ್ಳ ದೇವಾಲಯಗಳಲ್ಲಿ ಒಂದಾಗಿದೆ.ಪಡುವಣ ಕಡಲಿನಿಂದ ಆರಂಭಗೊಂಡು ಸೌಪರ್ಣಿಕಾ ನದಿಯಿಂದ ಸುತ್ತುವರಿಯಲ್ಪಟ್ಟ ಗಂಗೊಳ್ಳಿ,ಗುಜ್ಜಾಡಿ,ತ್ರಾಸಿ ಮತ್ತು ಹೊಸಾಡು ಈ ನಾಲ್ಕು ಗ್ರಾಮಗಳ ಗ್ರಾಮದೇವರಾದ ಶ್ರೀ ಗುಹೇಶ್ವರ ಸನ್ನಿಧಾನದಲ್ಲಿ ಜೀರ್ಣೋದ್ಧಾರ ಅಂಗವಾಗಿ ಕೇರಳದ ಪ್ರಸಿದ್ಧ ದೈವಜ್ಞರಾದ ಶ್ರೀ ನಾರಾಯಣ ನಂಬೂದಿರಿ ಕೈಮುಕ್ಕು ಹಾಗೂ ಇತರ ದೈವಜ್ಞರ ಸಹಕಾರದೊಂದಿಗೆ ಅಷ್ಟಮಂಗಲ ಪ್ರಶ್ನೆಯು ಅ.7 ರಂದು ಶನಿವಾರ ದಿಂದ ಆರಂಭಗೊಂಡು ಅ.09 ರ ಸೋಮವಾರ […]

You cannot copy content of this page