ದೇವಾಡಿಗ ನವೋದಯ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
ಬೆಂಗಳೂರು:ದೇವಾಡಿಗ ನವೋದಯ ಸಂಘದ ವಾರ್ಷಿಕ ಮಹಾಸಭೆ ಇತ್ತೀಚಿಗಷ್ಟೇ ಬೆಂಗಳೂರಿನ ಶ್ರೀನಿಧೀ ಲೇಔಟ್ ವೆಲ್ ಫೇರ್ ಅಸೋಸಿಯೇಷನ್ ಸಭಾಭವನದಲ್ಲಿ ನಡೆಯಿತು.ಬೆಂಗಳೂರು ದೇವಾಡಿಗ ನವೋದಯ ಸಂಘದ ಅಧ್ಯಕ್ಷ ಬಿ.ಆರ್ ದೇವಾಡಿಗ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ದೇವಾಡಿಗ ಸಂಘದ 2019-23ರ ಸಾಲಿನ ಕಾರ್ಯಕ್ರಮಗಳ ವರದಿ ವಾಚಿಸಿದರು. ಸಂಘದ ಕೋಶಾಧಿಕಾರಿ ಮಂಜುನಾಥ ದೇವಾಡಿಗ ಸಂಘ 2019-23ರ ಸಾಲಿನ ಆಯವ್ಯಯಗಳ ವರದಿ ವಾಚಿಸಿದರು. ದೇವಾಡಿಗ ನವೋದಯ ಸಂಘ ರಿ ಬೆಂಗಳೂರು ಇದರ 2023-2025ರ ನೂತನ ಕೋರ್ ಕಮಿಟಿ […]