ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆ,ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಕುಂದಾಪುರ:ಸಂಗೀತ ಕೇಳುವುದರಿಂದ ಕಿವಿಗೆ ಇಂಪು ನೀಡುವುದರ ಜತೆಗೆ ದೇಹದಲ್ಲಿ ಖುಷಿಯ ಹಾರ್ಮೋನ್‍ಗಳು ಉತ್ಪತ್ತಿಯಾಗಿ ಮನಸ್ಸು ಲವಲವಿಕೆಯಿಂದ ಕೂಡಿರಲು ಸಹಕರಿಸುತ್ತದೆ.ಮನವು ಖಿನ್ನತೆಯಿಂದ ಕೂಡಿದ್ದಾಗ ಸಂಗೀತ ಕೇಳುವುದರಿಂದ ಒತ್ತಡ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ.ಸಂಗೀತಕ್ಕೆ ಮಾನಸಿಕ ಒತ್ತಡವನ್ನು ಹೊಗಲಾಡಿಸುವ ತಾಕತ್ತು ಇದೆ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ಕೆ ಹೇಳಿದರು.ಶ್ರೀದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಲೆ ಮಸ್ಕಿ-ನಾವುಂದ ವತಿಯಿಂದ ಹಿಂದು ಅಭ್ಯುದಯ ಶ್ರೀಮಾಂಗಲ್ಯ ಮಹಾಗಣಪತಿ ಮಂಟಪ ನಾವುಂದದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ನೂರಾರು ವರ್ಷಗಳ ಕಾಲದ […]