ಅವಕಾಶಗಳನ್ನು ಬಳಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣ:ಡಾ.ಹೆಚ್.ಎಸ್ ಶೆಟ್ಟಿ
ಕುಂದಾಪುರ:ಗಂಗೊಳ್ಳಿ ಬಂದರಿನ ಅಭಿವೃದ್ಧಿಯನ್ನು ಕಡೆಗಣಿಸಿದ್ದರಿಂದ ಅವಕಾಶಗಳನ್ನು ಬಳಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಸಂಪನ್ಮೂಲವನ್ನು ಬಳಸಿಕೊಂಡು ಬೈಂದೂರು ಕ್ಷೇತ್ರದಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಗೊಂಡರೆ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ದೊರಕುದರ ಜತೆಗೆ ವಲಸೆ ಪರ್ವಕ್ಕೆ ನಿಯಂತ್ರಣ ಹೇರಿದಂತೆ ಆಗುತ್ತದೆ ಎಂದು ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಹೇಳಿದರು.ತ್ರಾಸಿ ಕೊಂಕಣ ಖಾರ್ವಿ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭ,300 ಟ್ರೀಸ್ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಮೃದ್ಧ ಬೈಂದೂರು ಅನಾವರಣ ಕಾರ್ಯಕ್ರಮದಲ್ಲಿ ಅಭಿನಂದನಾ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ದೇಶ,ಸಮಾಜ ಕಟ್ಟಬೇಕಾದರೆ ಮಾತ್ರ ಭಾಷೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು […]