ಅ.29 ರಂದು ದುಬೈನ ಅಜ್ಮಾನ್‍ನಲ್ಲಿ ಕುಂದಗನ್ನಡ ಉತ್ಸವ-2023
ಕುಂದಾಪುರ:ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ವತಿಯಿಂದ ಕುಂದಗನ್ನಡ ಉತ್ಸವ 2023 ಕಾರ್ಯಕ್ರಮ ಅ.29 ರಂದು ದುಬೈನ ಅಜ್ಮಾನ್‍ನಲ್ಲಿ ನಡೆಯಲಿದೆ.ಪ್ರಥಮ ಬಾರಿಗೆ ಶ್ರೀ ಕ್ಷೇತ್ರ ಮಂದಾರ್ತಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಉತ್ಸವದಲ್ಲಿ ಅಪರೂಪದ ಸಾಧಕರನ್ನು ಗೌರವಿಸಿ ಕುಂದಾಪುರ ರತ್ನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ರಘುರಾಮ ದೇವಾಡಿಗ ಆಲೂರು ಹೇಳಿದರು.ತ್ರಾಸಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ದುಬೈನಲ್ಲಿ ವಾಸವಾಗಿರುವ ಕುಂದಗನ್ನಡಿಗರ ಸಹಾಯ ಹಾಗೂ ದಾನಿಗಳ ಸಹಕಾರದಿಂದ ನಮ್ಮ ಕುಂದಾಪ್ರ ಕನ್ನಡ ಬಳಗ […]