ಅಡಿಕೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಂಡ-ಮಡ್ಲಗೇರಿ ಬಾಬು ಆಚಾರ್ಯ
ಕುಂದಾಪುರ:ಬೈಂದೂರು ತಾಲೂಕಿನ ಹೇರೂರು ಗ್ರಾಮದ ಮಡ್ಲಗೇರಿ ನಿವಾಸಿಯಾದ ಬಾಬು ಆಚಾರ್ಯ ಅವರು ಬಿ.ಕಾಂ ಪದವೀಧರನಾಗಿದ್ದರೂ ಅವರ ಒಲವು ಮಾತ್ರ ಕೃಷಿ ಕ್ಷೇತ್ರದತ್ತ ಸೆಳೆದಿದೆ.ಕಳೆದ 30 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿರುವ ಅವರು ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡದೆ ಕೊಟ್ಟಿಗೆ ಗೊಬ್ಬರ,ಜೀವಾಮೃತ,ಎರೆಹುಳ ಗೊಬ್ಬರವನ್ನು ಉಪಯೋಗಿಸಿಕೊಂಡು ವಿನೂತನ ರೀತಿಯಲ್ಲಿ ತೋಟಗಾರಿಕೆ ಕೃಷಿಯನ್ನು ಮಾಡುತ್ತಾ ಜೀವನೋಪಾಯ ಕಂಡುಕೊಂಡಿದ್ದಾರೆ.ತಮ್ಮ 5 ಎಕರೆ ಕೃಷಿ ಭೂಮಿಯಲ್ಲಿ ಅಡಿಕೆ,ಕಾಳು ಮೆಣಸು ಮತ್ತು ತೆಂಗಿನ ಕೃಷಿ ಮಾಡಿಕೊಂಡು ಆದಾಯವನ್ನು ಗಳಿಸುವುದರ ಮುಖೇನ ಸ್ವಾಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ.ಕೃಷಿ ತೋಟದ ರಚನೆ […]