ಕೃಷಿಕ ಬಾಬು ಆಚಾರ್ಯಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ:ಸಾವಯವ ಗೊಬ್ಬರವನ್ನು ಬಳಕೆಮಾಡಿಕೊಂಡು ಅಡಿಕೆ,ತೆಂಗು,ಕಾಳು ಮೆಣಸು,ಭತ್ತ ಹಾಗೂ ಬಾಳೆ ಬೆಳೆಯನ್ನು ಬೆಳೆಯುತ್ತಿರುವ ಬೈಂದೂರು ತಾಲೂಕಿನ ಹೇರೂರು ಗ್ರಾಮದ ಮಡ್ಲಗೇರಿ ನಿವಾಸಿ ಪ್ರಗತಿಪರ ಕೃಷಿಕರಾದ ಬಾಬು ಆಚಾರ್ಯ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶ್ತಸಿ ದೊರೆತ್ತಿದೆ.

ಆಲೂರು:ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಕುಂದಾಪುರ:ಕಲ್ಪತರು ಕಲಾವಿದರು ಆಲೂರು ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಲೂರು ಸರಸ್ವತಿ ಶಾಲೆಯಲ್ಲಿ ಬುಧವಾರ ನಡೆದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಾದ ಇಂದಿರಾ,ಗಿರಿಜಾ,ವೆಂಕಮ್ಮ,ಸುಧಾ,ಲಲಿತ ಆಚಾರಿ,ಲಲಿತ ಮೊಗವೀರ,ಸಂಗೀತಾ,ಗುಲಾಬಿ,ಶಾರದ,ಸುಜಾತ,ಸುಶೀಲ,ಶೀಲಾವತಿ,ಕಲ್ಪನಾ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಅತಿಥಿಗಳು,ಸಂಘದ ಸದಸ್ಯರು ಉಪಸ್ಥಿತರಿದ್ದರು.

ಆಲೂರು:ಕನ್ನಡ ಕಲರವ-2023 ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ:ಗ್ರಾಮೀಣ ಭಾರತ ಉಳಿಯಬೇಕಾದರೆ ಸ್ಥಳೀಯ ಭಾಷೆ ಮತ್ತು ಆಚಾರ ವಿಚಾರಗಳನ್ನು ಉಳಿಸುವಂತಹ ಕೆಲಸ ಮಾಡಬೇಕು.ಒಂದೊಂದು ಭಾಷೆ ಒಂದೊಂದು ರೀತಿಯ ಸ್ವಭಾವವನ್ನು ಹೊಂದಿದ್ದು ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆ ಆಗಿದೆ.ಭಾಷೆ ಎನ್ನುವುದು ಸಾಂಸ್ಕøತಿಕ ಅಸ್ತಿತ್ವದಿಂದ ಕೂಡಿದೆ ಹೊರತು ರಾಜಕೀಯ ಅಸ್ತಿತ್ವದಿಂದಲ್ಲ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಅಭಿಪ್ರಾಯ ಪಟ್ಟರು.ಕನ್ನಡ ರಾಜ್ಯೋತ್ಸವ ಅಂಗವಾಗಿ ಕಲ್ಪತರು ಕಲಾವಿದರು ಆಲೂರು ವತಿಯಿಂದ ಸರಸ್ವತಿ ವಿದ್ಯಾಲಯ ಆಲೂರು ಶಾಲೆಯಲ್ಲಿ ಬುಧವಾರ ನಡೆದ ಎರಡನೇ ವರ್ಷದ ಕನ್ನಡ ಕಲರವ-2023 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಲೆ,ಸಾಹಿತ್ಯ ಮತ್ತು […]

You cannot copy content of this page