ತಲ್ಲೂರು:ಕಾಂಗ್ರೆಸ್ ಪಕ್ಷದ ಮುಖಂಡರಾದ ಶೇಖರ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಕುಂದಾಪುರ:ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಪದವಿಯನ್ನು ಬಯಸದಿರುವ ಶೇಖರ್ ಪೂಜಾರಿ ತಲ್ಲೂರು ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದಾರೆ ಅವರ ಪಕ್ಷ ನಿಷ್ಠೆ ಇತರರಿಗೂ ಪ್ರೇರಣೆ ಆಗಿರುವಂತಹದ್ದು.ಸಾಮಾಜಿಕ ಮನೋಭಾವದಿಂದ ಕೆಲಸವನ್ನು ಮಾಡುತ್ತಿರುವ ಅವರ ಅಕಾಲಿಕ ನಿಧನದಿಂದ ಪಕ್ಷಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ನಷ್ಟವಾಗಿದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.ತಲ್ಲೂರು ಮೂರ್ತೇದಾರ ಸಭಾಭವನದಲ್ಲಿ ಭಾನುವಾರ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧರಾದ ಕಾಂಗ್ರೆಸ್ ಪಕ್ಷದ ಮುಖಂಡ ಆಟೋ ಚಾಲಕ ಶೇಖರ ಪೂಜಾರಿ ಅವರ ಭಾವ […]

ಗಂಗೊಳ್ಳಿ:ಶ್ರೀ ಶಾರದಾ ದೇವಿ ವಿಗ್ರಹ ಪ್ರತಿಷ್ಠಾಪನೆ

ಕುಂದಾಪುರ:ಸೇವಾ ಸಂಘ,ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ವತಿಯಿಂದ ನವರಾತ್ರಿ ಉತ್ಸವದ ಪ್ರಯುಕ್ತ ಆಚರಿಸಲ್ಪಡುತ್ತಿರುವ 49ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಶಾರದಾ ದೇವಿ ವಿಗ್ರಹವನ್ನು ಮೆರವಣಿಗೆ ಮೂಲಕ ತಂದು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಶುಕ್ರವಾರ ಪ್ರತಿಷ್ಠಾಪಿಸಿ ತ್ರಿಕಾಲ ಪೂಜೆಯನ್ನು ನೆರವೇರಿಸಲಾಯಿತು.ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಶಾರದಾ ದೇವಿ ವಿಗ್ರಹವನ್ನು ಅ.25 ರಂದು ಪುರಮೆರವಣಿಗೆ ಮೂಲಕ ಜಲಸ್ಥಂಭನ ಮಾಡಲಾಗುತ್ತದೆ. ಶ್ರೀ […]

ಗಂಗೊಳ್ಳಿ:ಪ್ರಾರ್ಥನಾ ಪೈಗೆ ಪ್ರಥಮ ಸ್ಥಾನ

ಕುಂದಾಪುರ:ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಜೈನ್ ಕ್ರೀಡಾ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗ ತಂಡವನ್ನು ಪ್ರತಿನಿಧಿಸಿದ್ದ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರಾರ್ಥನಾ ಪೈ ಪ್ರಥಮ ಸ್ಥಾನಗಳಿಸಿದ್ದಾರೆ.ಪತ್ರಕರ್ತ ಬಿ.ರಾಘವೇಂದ್ರ ಪೈ ಗಂಗೊಳ್ಳಿ ಮತ್ತು ರಾಧಿಕಾ ಆರ್.ಪೈ ದಂಪತಿಯ ಪುತ್ರಿ.

You cannot copy content of this page