ಸಮಗ್ರ ಕೃಷಿಯಲ್ಲಿ ರಾಮಯ್ಯ ಶೆಟ್ಟಿ ಕಾಲ್ತೋಡು ಅವರ ವಿಶಿಷ್ಟ ಸಾಧನೆ
ಬೈಂದೂರು:ಕಾಲ್ತೋಡು ಗ್ರಾಮದ ನಿವಾಸಿ 58 ವರ್ಷ ಪ್ರಾಯದ ರಾಮಯ್ಯ ಶೆಟ್ಟಿ ಅವರ ವ್ಯಕ್ತಿತ್ವ ಪಾದರಸದಷ್ಟೆ ಚುರುಕು ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಲೆ ಇರುತ್ತಾರೆ,ಕೃಷಿಯಲ್ಲಿ ಅಗಾಧವಾದ ಅನುಭವ ಹೊಂದಿರುವ ರಾಮಯ್ಯ ಶೆಟ್ಟಿ ಅವರು 8ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.ತನ್ನ 16 ನೇ ವಯಸ್ಸಿನಲ್ಲೇ ಕೃಷಿ ಕ್ಷೇತ್ರಕ್ಕೆ ಧುಮುಕಿದ ಅವರು ಹಿಂದೆ ಮುಂದೆ ನೋಡಲೆ ಇಲ್ಲ ತನ್ನ ವಯಸ್ಸಿನ ದಿನಗಳನ್ನು ಕೃಷಿ ಕಾಯಕದೊಂದಿಗೆ ಕಳೆದ ಕಾಯಕಯೋಗಿ ಎಂದೆ ಹೇಳಬಹುದು.ತನ್ನ 11 ಎಕರೆ ಕೃಷಿ ಭೂಮಿಯಲ್ಲಿ ಸಮಗ್ರ […]