ಕೋಟೇಶ್ವರದಲ್ಲಿ ಸರಣಿ ಅಪಘಾತ,ಮೂರು ವಾಹನ ಜಖಂ
ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66ರ ಕೋಟೇಶ್ವರದ ಗುರುಪ್ರಸಾದ್ ಹೋಟೆಲ್ ಸರ್ಕಲ್ ಸಮೀಪ ಭಾನುವಾರ ಉಡುಪಿಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಮೀನು ಸಾಗಾಟದ ಇನ್ಸುಲೇಟರ್ ಕಂಟೈನರ್ ಲಾರಿಯೊಂದು ವೀಲ್ ಜಾಮ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರು ಹಾಗೂ ಸಮೀಪದಲ್ಲೇ ನಿಂತಿದ್ದ ಸರಕಾರಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಟ್ಟು 3 ವಾಹನಗಳು ಜಖಂಗೊಂಡಿವೆ.ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಕುಟುಂಬವೊಂದು ಕೋಟೇಶ್ವರದ ಕಿನಾರ ಬೀಚ್ ವೀಕ್ಷಿಸಿ ವಾಪಸಾಗುವ ಸಂದರ್ಭ ಕಿನಾರ ರಸ್ತೆಯಿಂದ ಸರ್ವಿಸ್ ರಸ್ತೆ ಮೂಲಕ […]























































































































































































































































































































































































































































































































































































































































































































































































































































































































































































































































































































































































































































































































































































































































































