ಲಕ್ಷ್ ರಾಜೇಶ್‍ಗೆ ಬಂಗಾರದ ಪದಕ

ಕುಂದಾಪುರ:ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 28 ನೇ ಐಡಿಯಲ್ ಪ್ಲೇ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಷನ್ ವಲ್ರ್ಡ್ ಸಿಟಿ ಕಪ್-2023 ಸ್ಪರ್ಧೆಯಲ್ಲಿ ಕುಂದಾಪುರ ಅಬಾಕಸ್ ಸೆಂಟರ್ ವತಿಯಿಂದ ಪ್ರತಿನಿಧಿಸಿದ್ದ ಹೊಸಾಡು ಗ್ರಾಮದ ಅರಾಟೆ ಲಕ್ಷ್ ರಾಜೇಶ್ ಬಂಗಾರದ ಪದಕ ಜಯಿಸಿದ್ದಾರೆ.ಅವರು ಅರಾಟೆ ರೇಷ್ಮಾ ಮತ್ತು ರಾಜೇಶ್ ದಂಪತಿ ಪುತ್ರ.19 ವಿವಿಧ ದೇಶಗಳಿಂದ ಸುಮಾರು 3000 ವಿದ್ಯಾರ್ಥಿಗಳು ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. (ಹೊಸಾಡು ಗ್ರಾಮದ ಅರಾಟೆ ಲಕ್ಷ್ ರಾಜೇಶ್‍ಗೆ ಬಂಗಾರದ ಪದಕ)

ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಟ್ಟದ ಚದುರಂಗ ಸ್ಪರ್ಧೆ ಉದ್ಘಾಟನೆ

ಕುಂದಾಪುರ:ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರಚದುರಂಗ ಸ್ಪರ್ಧೆ 2023-24 ಸರಕಾರಿ ಪದವಿ ಪೂರ್ವ ಕಾಲೇಜು ಕಂಬದಕೋಣೆ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌ ಅವರು ಚದುಮಕ್ಕಳ ಜೊತೆ ಶಾಸಕರು ಚದುರಂಗ ಸ್ಪರ್ಧೆ ಗೆ ಚಾಲನೆ ನೀಡಿ ಮಾತನಾಡಿ, ಸನಾತನ ಧರ್ಮದ ನಾಡದ ಭಾರತದ ಈ ಮಣ್ಣಿನಲ್ಲಿ ಜನ್ಮತಾಳಿದ ಪ್ರಖ್ಯಾತ ಆಟಗಳು ಎಲ್ಲವೂ ವಿದೇಶದಲ್ಲಿ ಪ್ರಖ್ಯಾತ ಗೊಂಡಿವೆ ನಮ್ಮ ನೆಲದಲ್ಲಿ ಹುಟ್ಟಿದ ಪಾರಂಪರಿಕ ಆಟಗಳನ್ನು ನಾವು ಮರೆಯುತ್ತಾ ಬಂದಿರುವುದು ವಿಷಾದನೀಯ ಸಂಗತಿ ಎಂದರು.ಗ್ರಾಮ […]

ಕರಾವಳಿ ಭಾಗದಲ್ಲಿ ಕೈ ಕೊಟ್ಟ ಮಳೆ

ಕುಂದಾಪುರ:ಅಬ್ಬರಿಸಿ ಸುರಿದ ಮಳೆ ಕಳೆದ ಒಂದು ವಾರದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಭಾಗಗಳಲ್ಲಿ ಕೈ ಕೊಟ್ಟಿದೆ.ಮಳೆ ಕುಂಠಿತವಾಗಿದ್ದರಿಂದ ನೀರಿನ ಹರಿವು ಇಲ್ಲದೆ ಮಕ್ಕಿ ಗದ್ದೆಗಳು (ಒಣಭೂಮಿ) ನೀರಿಲ್ಲದೆ ಒಣಗಿ ಹೋಗಿದ್ದು ಆರಂಭಿಕ ಹಂತದಲ್ಲಿಯೆ ಭತ್ತದ ಬೆಳೆ ಸೊರಗಿದೆ.ಆಗಷ್ಟ್ ತಿಂಗಳಿನಲ್ಲಿ ಧಾರಾಕಾರವಾಗಿ ಸುರಿಯ ಬೇಕಿದ್ದ ಮಳೆ,ವಾಡಿಕೆ ಗಿಂತಲೂ ಕಡಿಮೆ ಪ್ರಮಾಣದಲ್ಲಿ ಸುರಿದಿದ್ದು ದಿನವಿಡಿ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ.ಮಳೆ ಚೆನ್ನಾಗಿ ಸುರಿದರೆ ಮಾತ್ರ ಬೇಸಾಯ ಕೈಹಿಡಿಯಲ್ಲಿದೆ ಎಂದು ರೈತರು ಹೇಳುತ್ತಾರೆ.

You cannot copy content of this page