ಮಕ್ಕಳ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ,ಸಾರ್ವಜನಿಕರಿಂದ ಆಕ್ರೋಶ
ಕುಂದಾಪುರ:ಹೇರಿಕುದ್ರು ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ ಹಮ್ಮಿಕೊಂಡಿರುವ ಮಕ್ಕಳ ಯಕ್ಷಗಾನ ಸಪ್ತಾಹದಲ್ಲಿ ಶನಿವಾರ ರಾತ್ರಿ ಪ್ರದರ್ಶನಕ್ಕೆ ಅಡ್ಡಿ ಉಂಟುಮಾಡಿದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.ಪ್ರದರ್ಶನದ ನಡುವೆ ಯಕ್ಷಗಾನ ಸಂಘಟಕರು ಅನಿವಾರ್ಯವಾಗಿ ಪ್ರದರ್ಶನ ನಿಲ್ಲಿಸುವ ಪರಿಸ್ಥಿತಿ ಎದುರಾಗಿದ್ದ ಘಟನೆ ನಡೆದಿದೆ. ಸಾರ್ವಜನಿಕ ದೂರಿನ ಹಿನ್ನೆಲೆ ಯಲ್ಲಿ ಪೊಲೀಸರು ಯಕ್ಷಗಾನಪ್ರದರ್ಶನ ನಿಲ್ಲಿಸುವಂತೆ ತಿಳಿಸಿದ್ದರಿಂದ ಅನಿವಾರ್ಯ ಕಾರಣದಿಂದ ಯಕ್ಷಗಾನ ಪ್ರದರ್ಶನ ನಿಲ್ಲಿಸಲಾಗಿದೆ.ಯಕ್ಷಗಾನ ವೇದಿಕೆಯಿಂದ ಚಿಣ್ಣರು ತೆರವು ಆಗಬೇಕೆಂದಾಗ ಪ್ರದರ್ಶನ ನೀಡುತ್ತಿದ್ದ ಮಕ್ಕಳು ಆಚ್ಚರಿ ಗೊಳಗಾದರು.ನಂತರ ಸಭಿಕರಿಗೆ ನಮಿಸಿ ವೇದಿಕೆ ತೆರವು ಗೊಳಿಸಿದರು. […]