ಕುಂದಾಪುರ:ಅಕಾಲಿಕ ಮಳೆಯಿಂದ ಭತ್ತದ ಬೆಳೆಗೆ ಸಂಕಷ್ಟ
ಕುಂದಾಪುರ:ಅಕಾಲಿಕವಾಗಿ ಸುರಿದ ಬಾರಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆ,ನಾಡ,ತಾರಿಬೇರು,ಜಡ್ಡಾಡಿ,ಕಡಿಕೆ,ಕೋಣ್ಕಿ ಹಾಗೂ ಹೆಮ್ಮಾಡಿ ಭಾಗದಲ್ಲಿ ಕೃಷಿ ನಷ್ಟ ಉಂಟಾಗಿದೆ.ಜಾನುವಾರುಗಳ ಬೈಹುಲ್ಲು ಬೈಲಿನಲ್ಲಿ ಕೊಳೆಯುತ್ತಿದೆ.ಹವಾಮಾನ ವೈಪರಿತ್ಯದಿಂದಾಗಿ ಭಾನುವಾರ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಗೆ ಸಂಕಷ್ಟ ಎದುರಾಗಿದ್ದು ಮಳೆ ಕಾರಣದಿಂದ ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡದೆ ಫಸಲು ಭರಿತ ಬೆಳೆ ಬೈಲಿನಲ್ಲಿ ನಶೀಸುತ್ತಿದೆ.ಭತ್ತದ ಬೆಳೆಗೆ ಅವಶ್ಯಕವಾಗಿರುವ ಸಂದರ್ಭ ಮಳೆ ಕೈಕೊಟ್ಟಿದ್ದು ಕೊಯ್ಲು ಸಮಯದಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ.ಕೊಯ್ಲು ಮಾಡಿದ […]