ಆಲೂರು:ಕನ್ನಡ ಕಲರವ-2023 ಕಾರ್ಯಕ್ರಮ ಉದ್ಘಾಟನೆ
ಕುಂದಾಪುರ:ಗ್ರಾಮೀಣ ಭಾರತ ಉಳಿಯಬೇಕಾದರೆ ಸ್ಥಳೀಯ ಭಾಷೆ ಮತ್ತು ಆಚಾರ ವಿಚಾರಗಳನ್ನು ಉಳಿಸುವಂತಹ ಕೆಲಸ ಮಾಡಬೇಕು.ಒಂದೊಂದು ಭಾಷೆ ಒಂದೊಂದು ರೀತಿಯ ಸ್ವಭಾವವನ್ನು ಹೊಂದಿದ್ದು ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆ ಆಗಿದೆ.ಭಾಷೆ ಎನ್ನುವುದು ಸಾಂಸ್ಕøತಿಕ ಅಸ್ತಿತ್ವದಿಂದ ಕೂಡಿದೆ ಹೊರತು ರಾಜಕೀಯ ಅಸ್ತಿತ್ವದಿಂದಲ್ಲ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಅಭಿಪ್ರಾಯ ಪಟ್ಟರು.ಕನ್ನಡ ರಾಜ್ಯೋತ್ಸವ ಅಂಗವಾಗಿ ಕಲ್ಪತರು ಕಲಾವಿದರು ಆಲೂರು ವತಿಯಿಂದ ಸರಸ್ವತಿ ವಿದ್ಯಾಲಯ ಆಲೂರು ಶಾಲೆಯಲ್ಲಿ ಬುಧವಾರ ನಡೆದ ಎರಡನೇ ವರ್ಷದ ಕನ್ನಡ ಕಲರವ-2023 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಲೆ,ಸಾಹಿತ್ಯ ಮತ್ತು […]