ಶ್ರೀಗುಹೇಶ್ವರ ದೇವಸ್ಥಾನದಲ್ಲಿ ಸಂಜೀವಿನಿ ಮೃತ್ಯುಂಜಯ ಹೋಮ,ಮುಷ್ಠಿಕಾಣಿಕೆ ಸಮರ್ಪಣೆ
ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀಗುಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಹಮ್ಮಿಕೊಂಡಿದ್ದ ಅಷ್ಟಮಂಗಲ ಪ್ರಶ್ನಾ ಚಿಂತನಾ ವಿಮರ್ಶೆಯ ಪ್ರಕಾರ ಮೊದಲ ಹಂತದ ಪ್ರಾಯಶ್ಚಿತ ಭಾಗವಾಗಿ ಹಾಗೂ ಲೋಕ ಕಲ್ಯಾಣ ಮತ್ತು ರುದ್ರಕೋಪ ಶಮನಾರ್ಥವಾಗಿ ಸಂಜೀವಿನಿ ಮೃತ್ಯುಂಜಯ ಹೋಮ,ಗಣಹೋಮ,ಮುಷ್ಠಿಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ಶ್ರೀಗುಹೇಶ್ವರ ದೇವಾಲಯದ ತಂತ್ರಿಗಳಾಗಿ ನೇಮಕಗೊಂಡಿರುವ ವೇ.ಮೂ ಶ್ರೀಶ ಅಡಿಗ ಅವರಿಗೆ ಗ್ರಾಮಸ್ಥರ ಪರವಾಗಿ ವರಣೆಯನ್ನು ನೀಡಲಾಯಿತು.ಈ ಸಂದರ್ಭ ವ್ಯವಸ್ಥಾಪನಾ ಮತ್ತು ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು,ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.ಪ್ರತಿ ಸೋಮವಾರ ಗ್ರಾಮಸ್ಥರು ಹಾಗೂ […]