ಬೈಂದೂರು ತಾಲೂಕು ಆಡಳಿತ ಕೇಂದ್ರದ ಅವ್ಯವಸ್ಥೆ ವಿರುದ್ಧ ಸಾಮಾಜಿಕ ಹೋರಾಟಗಾರ ರಿಂದ ಪ್ರತಿಭಟನೆ

ಬೈಂದೂರು:ತಾಲೂಕು ಕೇಂದ್ರವಾದ ಬೈಂದೂರಿನ ತಾಲೂಕು ಆಡಳಿತ ಸೌಧ ನಿರ್ಮಾಣವಾಗಿ ವರ್ಷ ಕಳೆದರೂ ಪೂರ್ಣಪ್ರಮಾಣದಲ್ಲಿ ಸೇವೆ ದೊರೆಯುತ್ತಿಲ್ಲ.ಶೌಚಾಲಯ, ಫ್ಯಾನ್ ಸೇರಿದಂತೆ ಯಾವುದೇ ವ್ಯವಸ್ಥೆಗಳಿಲ್ಲ. ಮಾತ್ರವಲ್ಲದೆ ಕಂದಾಯ ಅಧಿಕಾರಿಗಳನ್ನು ಭೇಟಿ ಮಾಡಲು ಆಗಮಿಸುವ ಸಾರ್ವ ಜನಿಕರಿಗೆ ಕನಿಷ್ಠ ಒಂದೂ ಆಸನದ ವ್ಯವಸ್ಥೆಯಿಲ್ಲ.ಕಂದಾಯ ಕೋರ್ಟ್ ಇದ್ದಾಗ ಹಿರಿಯರು ಮಹಿಳೆಯ ರು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಹೀಗಾಗಿ ಆಸನ ವ್ಯವಸ್ಥೆ ಮಾಡುವವರೆಗೆ ತಹಶೀಲ್ದಾರ್ ಕಚೇರಿ ಎದುರು ಸಾಮಾಜಿಕ ಹೋರಾಟಗಾರ ಸುಬ್ರಹ್ಮಣ್ಯ ಬಿಜೂರು ಮಲಗಿ ಪ್ರತಿಭಟಿಸಿದರು.ಬಳಿಕ ಕಂದಾಯ ಅಧಿಕಾರಿಗಳು ಕುರ್ಚಿ ವ್ಯವಸ್ಥೆ ಮಾಡಿದರು.ಬೈಂದೂರು ಕಂದಾಯ ಇಲಾಖೆಯಲ್ಲಿ […]

ಸಂಚಲನ ಹೊಸಾಡು ವತಿಯಿಂದ ಕ್ಷಯ ರೋಗಿಗಳಿಗೆ ಕಿಟ್ ಕೊಡುಗೆ

ಕುಂದಾಪುರ:ಹೊಸಾಡು ಗ್ರಾಮ ಪಂಚಾಯತ್ ಹಾಗೂ ಸಂಚಲನ ಹೊಸಾಡು,ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ,ಕ್ಷೇಮ ಕೇಂದ್ರ ಹೊಸಾಡು ವತಿಯಿಂದ ಹೊಸಾಡು ಗ್ರಾಮ ಪಂಚಾಯತ್‍ನಲ್ಲಿ ಶನಿವಾರ ನಡೆದ ಕ್ಷಯ ರೋಗ ಮಾಹಿತಿ ಮತ್ತು ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಂಚಲನ ಹೊಸಾಡು ವತಿಯಿಂದ ಕ್ಷಯ ರೋಗಿಗಳಿಗೆ ಕಿಟ್‍ನ್ನು ಕೊಡುಗೆ ಆಗಿ ನೀಡಲಾಯಿತು.ಪಿಡಿಒ ಪಾರ್ವತಿ,ಸಂಚಲ ಹೊಸಾಡು ಸದಸ್ಯರಾದ ಪ್ರದೀಪ್ ಆಚಾರ್ಯ,ರಾಘವೇಂದ್ರ ಶೆಟ್ಟಿ,ಪ್ರದೀಪ್ ಬಿಲ್ಲವ,ಆಶಾ ಕಾರ್ಯಕರ್ತೆಯರಾದ ಪ್ರೇಮಾ,ಯಶೋಧ ಅರಾಟೆ,ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.ಸಮುದಾಯ ಆರೋಗ್ಯಾಧಿಕಾರಿ ಪ್ರವೀಣ್ ಕುಮಾರ್ ಸ್ವಾಗತಿಸಿ,ವಂದಿಸಿದರು.ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕ್ಷಯ ರೋಗಳಿಗೆ ಸಂಚಲನ […]

ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ವಿಫಲ ಯತ್ನ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಬೆಳಗಿನ ಜಾವಾ ಕಳವಿಗೆ ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸೆ.3 ರಂದು ಶುಕ್ರವಾರ ಬೆಳಗಿನ ಜಾವಾ 1.40 ರ ಸುಮಾರಿಗೆ ರಾಷ್ಷ್ರೀಯ ಹೆದ್ದಾರಿ 66 ರಲ್ಲಿ ಬೈಕ್‍ನಲ್ಲಿ ಬಂದಿಳಿದ ಇಬ್ಬರು ಕಳ್ಳರು ಮರವಂತೆ ಶ್ರೀರಾಮ ಮಂದಿರದ ಪ್ರಾಂಗಣಕ್ಕೆ ನುಗ್ಗಿದ್ದಾರೆ.ಹೆಲ್ಮೆಟ್ ಧರಿಸಿದ ವ್ಯಕ್ತಿಯೊರ್ವ ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಮುರಿದು ಕಳವಿಗೆ ಯತ್ನಿಸಿದ್ದಾನೆ.ಕಬ್ಬಿಣದ ಬಾಗಿಲನ್ನು ಮುರಿದು ಒಳನುಗ್ಗಲು ಅಸಾಧ್ಯವೇನಿಸಿದಾಗ ಕಳ್ಳರಿಬ್ಬರೂ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ಯತ್ನಿಸಿ ವಿಫಲರಾಗಿದ್ದ […]

You cannot copy content of this page