ಕಾಲಭೈರವ ದೇವರನ್ನು ಹೊತ್ತು ಮನೆ ಮನೆಗೆ ತಿರುಗಾಟ, ಜೋಗಿ ಕಟ್ಟುವ ಕಾರ್ಯಕ್ಕೆ ಚಾಲನೆ
ಬೈಂದೂರು:ಹಳಗೇರಿ ಶ್ರೀಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಾಭೈರವ ದೇವಸ್ಥಾನದಲ್ಲಿ ಕಾಲಾನು ಕಾಲದಲ್ಲಿ ನಡೆದು ಬಂದ ಸಂಪ್ರದಾಯದಂತೆ ಜೋಗಿ ಕಟ್ಟುವುದು ಕಾರ್ಯಕ್ರಮ ಶುಕ್ರವಾರ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.ಸುಮಾರು 800 ವರ್ಷಗಳ ಕಾಲ ಇತಿಹಾಸ ಹೊಂದಿರುವ ನಾಥಪರಂಪರೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನ ಸಾಕಷ್ಟು ಇತಿಹಾಸವನ್ನು ಹೊಂದಿರುವ ದೇವಾಲಯಗಳಲ್ಲಿ ಒಂದಾಗಿದೆ.ತೆಂಕಬೆಟ್ಟು ಕ್ಷೇತ್ರದ ಜೋಗಿ ಮನೆತನದವರು ಜೋಗಿ ಕಟ್ಟುವ ಕಾರ್ಯವನ್ನು ಹಲವಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿರುತ್ತಾರೆ.ಇಂದಿನ ಆಧುನಿಕ ಯುಗದಲ್ಲಿಯೂ ಸಹ ಹಿಂದಿನ […]