ಉಪ್ಪುಂದ: ಸತೀಶ್ ಕೊಠಾರಿಗೆ ಸಾಧನ ಶ್ರೀ ಉದ್ಯಮ ರತ್ನ ಪ್ರಶಸ್ತಿ ಪ್ರದಾನ

ಬೈಂದೂರು:JCI ಉಪ್ಪುಂದ ದಿಗ್ವಿಜಯ 2023 19ನೇ JC ಸಪ್ತಾಹ ಏಳನೇ ದಿನದ ಸಮಾರೋಪ ಸಮಾರಂಭದಲ್ಲಿ ಸತೀಶ್ ಕೊಠಾರಿ ಅವರಿಗೆ ಸಾಧನ ಶ್ರೀ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸತೀಶ್ ಕೊಠಾರಿ ಅವರುಪ್ರಾಥಮಿಕ ಶಿಕ್ಷಣವಾದ 5ನೇ ತರಗತಿಯನ್ನು ಅರ್ಧಕ್ಕೆ ಮುಗಿಸಿ,ಮನೆಯ ಬಡತನವನ್ನು ನೀಗಿಸಬೇಕೆಂಬ ಛಲದೊಂದಿಗೆ ಬೆಂಗಳೂರಿಗೆ ತೆರಳುತ್ತಾರೆ.ಸಣ್ಣ ಪುಟ್ಟ ಹೋಟೆಲ್,ಕ್ಯಾಂಟೀನ್ ಗಳಲ್ಲಿ ಕ್ಲೀನರ್ ಆಗಿ,ವೆಸ್ಟರ್ ಆಗಿ ಕೆಲಸ ಮಾಡುತ್ತಾ ತನ್ನ ಪ್ರಾರಂಭಿಕ ದುಡಿಮೆಯನ್ನು ಆರಂಭಿಸುತ್ತಾರೆ.ಎಷ್ಟೇ ದುಡಿದರೂ ಮನೆಯ ಬಡತನದ ಪರಿಸ್ಥಿತಿ ಸುಧಾರಿಸದೇ ಇರುವುದನ್ನು ಮನಗಂಡು ಇನ್ನೂ ಹೆಚ್ಚಿನ ದುಡಿಮೆಗಾಗಿ […]

ಹೆಮ್ಮಾಡಿ:ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಶುಕ್ರವಾರ ನಡೆಯಿತು.ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ದೇವಪ್ಪ ಪೂಜಾರಿ ಉದ್ಘಾಟಿಸಿ ಪೋಷಣ್ ಅಭಿಯಾನ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.ಸಮುದಾಯ ಆರೋಗ್ಯ ಕೇಂದ್ರ ಹೆಮ್ಮಾಡಿ ವೈದ್ಯರಾದ ವತ್ಸಲ,ಯೋಗ ಶಿಕ್ಷಕಿ ಸುಜಾತ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು.ಶಿಕ್ಷಕಿ ಸುಶೀಲ ನಿರೂಪಿಸಿದರು.ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.

ನಾವುಂದ:ಇಂಜಿನಿಯರ್ ವಿಜೇಂದ್ರ ಆಚಾರ್ಯಗೆ ಸನ್ಮಾನ

ಬೈಂದೂರು:ಸರ್.ಎಂ ವಿಶೇಶ್ವರಯ್ಯರವರ ಜನ್ಮ ಜಯಂತಿ ಪ್ರಯುಕ್ತ ನಾವುಂದ ಮೆಸ್ಕಾಂ ವಿಭಾಗದ ಜೂನಿಯರ್ ಇಂಜಿನಿಯರ್ (ಜೆ.ಇ) ವಿಜೇಂದ್ರ ಆಚಾರ್ಯ ಅವರನ್ನು ನಾವುಂದ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ ಶೆಟ್ಟಿ,ನಾವುಂದ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ,ಕ್ಲಬ್ಬಿನ ಕಾರ್ಯದರ್ಶಿ ಅಶೋಕ ವಿ ಆಚಾರ್ಯ,ಉಪಾಧ್ಯಕ್ಷ ಸಮರ ಶೆಟ್ಟಿ,ಮೆಸ್ಕಾಂ ಮೇಲ್ವಿಚಾರಕ ಅಧಿಕಾರಿ ಸುಧಾಕರ,ದಿನೇಶ್ ಆಚಾರ್ಯ,ವಿಜಯ ಶೆಟ್ಟಿ,ಪ್ರಮೋದ್ ಪೂಜಾರಿ ಉಪಸ್ಥಿತರಿದ್ದರು.

You cannot copy content of this page