ಕಂಚುಗೋಡು ಶಾಲೆ:ಯೋಗ ತರಬೇತಿ ಶಿಬಿರ ಉದ್ಘಾಟನೆ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಕಂಚುಗೋಡು ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಉಚಿತ ಯೋಗ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ಗಿರಿಜಾ.ಎಂ ಉದ್ಘಾಟಿಸಿದರು,ಯೋಗ ಗುರು ನಾರಾಯಣ ದೇವಾಡಿಗ,ಶಾಲಾ ಎಸ್‍ಡಿಎಂಸಿ ಸದಸ್ಯರಾದ ಭಾರತಿ,ಲೀಲಾವತಿ,ಅಂಗನವಾಡಿ ಕಾರ್ಯಕರ್ತೆ ರೇಣುಕಾ,ಸಹ ಶಿಕ್ಷಕರಾದ ನಾಗಮ್ಮ,ಹರ್ಷ,ಉಷಾ ಉಪಸ್ಥಿತರಿದ್ದರು.ನಿವೃತ್ತ ಮುಖ್ಯೋಪಾಧ್ಯಾಯರಾದ ಯೋಗ ಗುರು ನಾರಾಯಣ ದೇವಾಡಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಹತ್ತು ದಿನಗಳ ಕಾಲ ಉಚಿತವಾಗಿ ಯೋಗ ತರಬೇತಿಯನ್ನು ನೀಡಲಿದ್ದಾರೆ.

ಗುಜ್ಜಾಡಿ:ಎಸ್‍ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿ

ಗುಜ್ಜಾಡಿ:ಎಸ್‍ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿ ಕುಂದಾಪುರ:ಶಾಲೆಗಳಲ್ಲಿ ಬಿಸಿ ಊಟವನ್ನು ತಯಾರು ಮಾಡುತ್ತಿರುವ ಅಡುಗೆ ಸಿಬ್ಬಂದಿಗಳು ಮುಷ್ಕರವನ್ನು ಕೈಗೊಂಡಿದ್ದರಿಂದ ಶಾಲೆಗೆ ಬಿಸಿಯೂಟ ನೌಕರರು ಗೈರಾಗಿದ್ದರ ಪರಿಣಾಮ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಗುಜ್ಜಾಡಿ ಶಾಲೆಯ ಹಳೆ ವಿದ್ಯಾರ್ಥಿಗಳಾದ ಊಷ ಪೂಜಾರಿ,ಸುಕೇಶ್ ಹಾಗೂ ಎಸ್‍ಡಿಎಂಸಿ ಸದಸ್ಯರಾದ ಗಾಯಿತ್ರಿ ಕೊಡಂಚ,ಶಾಂತ ದೇವಾಡಿಗ,ತನುಜಾ,ಮಹೇಶ ಆಚಾರ್ಯ ಅವರು ಬುಧವಾರ ಬಿಸಿ ಊಟವನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಬಡಿಸಿದರು.ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ ಮೇಲ್ವಿಚಾರಣೆಯನ್ನು ನೋಡಿಕೊಂಡರು.

ಕುಂದಾಪುರ:ಅಕಾಲಿಕ ಮಳೆಯಿಂದ ಭತ್ತದ ಬೆಳೆಗೆ ಸಂಕಷ್ಟ

ಕುಂದಾಪುರ:ಅಕಾಲಿಕವಾಗಿ ಸುರಿದ ಬಾರಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆ,ನಾಡ,ತಾರಿಬೇರು,ಜಡ್ಡಾಡಿ,ಕಡಿಕೆ,ಕೋಣ್ಕಿ ಹಾಗೂ ಹೆಮ್ಮಾಡಿ ಭಾಗದಲ್ಲಿ ಕೃಷಿ ನಷ್ಟ ಉಂಟಾಗಿದೆ.ಜಾನುವಾರುಗಳ ಬೈಹುಲ್ಲು ಬೈಲಿನಲ್ಲಿ ಕೊಳೆಯುತ್ತಿದೆ.ಹವಾಮಾನ ವೈಪರಿತ್ಯದಿಂದಾಗಿ ಭಾನುವಾರ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಗೆ ಸಂಕಷ್ಟ ಎದುರಾಗಿದ್ದು ಮಳೆ ಕಾರಣದಿಂದ ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡದೆ ಫಸಲು ಭರಿತ ಬೆಳೆ ಬೈಲಿನಲ್ಲಿ ನಶೀಸುತ್ತಿದೆ.ಭತ್ತದ ಬೆಳೆಗೆ ಅವಶ್ಯಕವಾಗಿರುವ ಸಂದರ್ಭ ಮಳೆ ಕೈಕೊಟ್ಟಿದ್ದು ಕೊಯ್ಲು ಸಮಯದಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ.ಕೊಯ್ಲು ಮಾಡಿದ […]

You cannot copy content of this page