ಶ್ರೀನಾಗಕನ್ನಿಕಾ ಪರಮೇಶ್ವರಿ ದೇವಸ್ಥಾನ ಶ್ರೀಕ್ಷೇತ್ರ ಹಣಿನಮಕ್ಕಿ

ಕುಂದಾಪುರ:ಹೊಸಾಡು ಗ್ರಾಮದ ಅರಾಟೆ ಶ್ರೀನಾಗಕನ್ನಿಕಾ ಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಹಣಿನಮಕ್ಕಿಯಲ್ಲಿ ನಾಗರ ಪಂಚಮಿ ಉತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ನಡೆಯಿತು.ನಾಗರ ಪಂಚಮಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜಾಭಿಷೇಕ,ಹಣ್ಣುಕಾಯಿ,ಮಂಗಳಾರತಿ ಸೇವೆ ಹಾಗೂ ಪ್ರಸಾದ ವಿತರಣಾ ಕಾರ್ಯಕ್ರಮ ಜರುಗಿರತು.

ಶ್ರೀಕ್ಷೇತ್ರ ಶ್ರೀ ಗುಡ್ಡಮ್ಮಾಡಿ ದೇವಸ್ಥಾನ

ಕುಂದಾಪುರ:ಪ್ರಸಿದ್ಧ ಶ್ರೀ ಕ್ಷೇತ್ರ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ಜರುಗಿತು.ನಾಗರ ಪಂಚಮಿ ಹಬ್ಬದ ಪ್ರಯುಕ್ತ ಸಂತಾನಕಾರಕನಾದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸೀಯಾಳಭಿಷೇಕ, ತನು ಸೇವೆ,ಹಣ್ಣುಕಾಯಿ ಮತ್ತು ಮಂಗಳಾರತಿ ಸೇವೆ ಹಾಗೂ ಹುಗ್ಗಿ ಸೇವೆ ನಡೆಯಿತು.ನೂರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ನಾಗಾನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ

ಕುಂದಾಪುರ:ಧನ,ಧಾನ್ಯ ಉಳ್ಳವರು ಸಾಮಾಜಿಕ ಮನೋಭಾವ ಬೆಳೆಸಿಕೊಂಡು ಸಮಾಜದಲ್ಲಿನ ಅಶಕ್ತರ ಕಷ್ಟಗಳಿಗೆ ಸ್ಪಂದನೆ ಮಾಡುವ ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆಯನ್ನು ಹೊಂದುತ್ತದೆ.ಇಂದಿನ ಮನುಷ್ಯನ ಜೀವನವು ಹಣದ ಬಲದ ಮೇಲೆ ನಿಂತ್ತಿರುವುದು ಅಪಾಯಕಾರಿ ಆಗಿದೆ ಇದು ದೇವರ ಮೇಲಿನಾ ಭಕ್ತಿ ಮೇಲೆ ಪರಿಣಾಮವನ್ನು ಕೂಡ ಬೀರಿದೆ ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ,ಮುಂಬೈ ಅಧ್ಯಕ್ಷ ರಾಜು ಎಮ್ ಮೆಂಡನ್ ಅಭಿಪ್ರಾಯ ಪಟ್ಟರು.ಬೈಂದೂರು ತಾಲೂಕಿನ ಮರವಂತೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ನಡೆದ ನಾಗರ ಪಂಚಮಿ ಉತ್ಸವದ ಪ್ರಯುಕ್ತ […]

You cannot copy content of this page