ತೋಪ್ಲು ಕಿಂಡಿ ಅಣೆಕಟ್ಟಿಗೆ ಹೊಸ ಹಲಗೆ ಅಳವಡಿಕೆಗೆ ಗ್ರಾಮಸ್ಥರ ಆಗ್ರಹ
ಕುಂದಾಪುರ:ಹಕ್ಲಾಡಿ ಗ್ರಾಮದ ತೋಪ್ಲು ಎಂಬಲ್ಲಿ ಚಕ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟಿಗೆ ಶಿಥಿಲಾವಸ್ಥೆಯಲ್ಲಿರುವ ಹಲಗೆಗಳನ್ನು ಅಳವಡಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ. ಚಕ್ರ ನದಿ ತೀರದ ಗ್ರಾಮಗಳಾದ ಹಕ್ಲಾಡಿ,ಬಾರಂದಾಡಿ,ಬಗ್ವಾಡಿ,ಕಟ್ ಬೇಲ್ತೂರು,ತುಳಸಿ,ತೋಪ್ಲು,ವಂಡ್ಸೆ ಗ್ರಾಮದ ಜನರಿಗೆ ಕೃಷಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಮಾರು 17 ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯಡಿ 13ಕೋಟಿ.ರೂ ವೆಚ್ಚದಲ್ಲಿ ಹಕ್ಲಾಡಿ ಗ್ರಾಮದ ತೋಪ್ಲು ಎಂಬಲ್ಲಿ ಚಕ್ರ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ.ಅಣೆಕಟ್ಟಿನ ನಿರ್ವಹಣೆಗೆಂದೇ ವರ್ಷಕ್ಕೆ […]