ಬೈಂದೂರು ತಾಲೂಕು ಸಮಾವೇಶ,ಮನೆ ಮನೆ ಮಂತ್ರಾಕ್ಷತಾ ಅಭಿಯಾನ

ಬೈಂದೂರು:ಅಯೋಧ್ಯೆ ರಾಮ ಮಂದಿರದಲ್ಲಿ ಪೂಜೆಗೊಂಡು ನಮ್ಮೂರಿಗೆ ಭವ್ಯ ಶೋಭಾ ಯಾತ್ರೆಯಲ್ಲಿ ಆಗಮಿಸಿದ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸಿಸುವ ಕಾರ್ಯ ಮಾಡಬೇಕಾಗಿದೆ ಎಂದು ಅಯೋಧ್ಯೆ ಶ್ರೀರಾಮ ಮಂದಿರ ಅಭಿಯಾನದ ಉಡುಪಿ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಹೇಳಿದರು.ಅಯೋಧ್ಯ ಶ್ರೀರಾಮ ಮಂದಿರ ಮಂತ್ರಾಕ್ಷತಾ ಅಭಿಯಾನ ಉಡುಪಿ ಜಿಲ್ಲೆ,ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾನ ಪ್ರಯುಕ್ತ ಮನೆ ಸಂಪರ್ಕ ಹಾಗೂ ಮಂತ್ರಾಕ್ಷತಾ ಅಭಿಯಾನ ಸಮಿತಿ ವತಿಯಿಂದ ಶ್ರೀಮಹಾಗಣಪತಿ ಮಾಂಗಲ್ಯ ಮಂಟಪ ನಾವುಂದದಲ್ಲಿ ಭಾನುವಾರ ನಡೆದ ಬೈಂದೂರು ತಾಲೂಕು ಸಮಾವೇಶವನ್ನು ಉದ್ದೇಶಿಸಿ […]

ಮಂತ್ರಾಕ್ಷತೆಯ ಬೃಹತ್ ಮೆರವಣಿಗೆ

ಬೈಂದೂರು:ಅಯೋಧ್ಯೆಯಲ್ಲಿ ಶ್ರೀರಾಮಲಲ್ಲನಿಗೆ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ಹಾಗೂ ಮರವಂತೆ ಶ್ರೀರಾಮ ಮಂದಿರದಲ್ಲಿ ಪೂಜಿಸಿದ ಮಂತ್ರಾಕ್ಷತೆಯನ್ನು ಪೂರ್ಣ ಕುಂಭದೊಂದಿಗೆ ವಿವಿಧ ಭಜನಾ ತಂಡ,ಕುಣಿತ ಭಜನೆ,ಚಂಡೆ ವಾದನದೊಂದಿಗೆ ಮರವಂತೆ ಶ್ರೀರಾಮ ಮಂದಿರ ದಿಂದ ನಾವುಂದ ಮಾಂಗಲ್ಯ ಮಂಟಪದ ವರೆಗೆ ಭವ್ಯ ಮೆರವಣಿಗೆ ಭಾನುವಾರ ನಡೆಯಿತು.ಮೆರವಣಿಗೆಯಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ,ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ರಾಮಕೃಷ್ಣ ಆಶ್ರಮ ಪರಮ ಪೂಜ್ಯ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿಗಳು ತಾಲೂಕಿನ ಎಲ್ಲಾ ಗ್ರಾಮಗಳಿಗೂ ಮಂತ್ರಾಕ್ಷತೆಯನ್ನು ವಿತರಿಸಿದರು.

ಹಕ್ಲಾಡಿ:ಅಕ್ಷರ ಮಂಟಪ,ದಿ.ಬಾಳೆಮನೆ ಭಾಸ್ಕರ ಶೆಟ್ಟಿ ರಂಗವೇದಿಕೆ ಲೋಕಾರ್ಪಣೆ

ಕುಂದಾಪುರ:ಬೈಂದೂರು ವಲಯದ ಹಕ್ಲಾಡಿ ಕೆ.ಎಸ್.ಎಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸರಕಾರಿ ಪ್ರೌಢಶಾಲೆಯಲ್ಲಿ ದಿ.ಬಾಳೆಮನೆ ಭಾಸ್ಕರ ಶೆಟ್ಟಿ ರಂಗವೇದಿಕೆ ಲೋಕಾರ್ಪಣೆ,ಅಕ್ಷರ ಮಂಟಪ ಸಭಾಂಗಣ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಶನಿವಾರ ನಡೆಯಿತು. ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಅಕ್ಷರ ಮಂಟಪ ಹಿರಿಯ ವಿದ್ಯಾರ್ಥಿ ಸಭಾಂಗಣ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಸಜ್ಜಿತವಾದ ಅಕ್ಷರ ಮಂಟಪ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕೆಲಸವಾಗಿದೆ.ನಮ್ಮಲ್ಲಿ ಸಾಮಾಜಿಕ ಕಳಕಳಿ ಜಾಗ್ರತವಾದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು […]

You cannot copy content of this page