ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಭೇಟಿ

ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಬೊಬ್ಬರ್ಯನಹಿತ್ಲು ಶ್ರೀಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಕಾಣಿಯೂರು ಮಠ ಉಡುಪಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಗಳು ಬುಧವಾರ ಭೇಟಿ ದೇವಳದ ಸಮಿತಿ ಅವರ ಜತೆ ಸಮಾಲೋಚನೆ ನಡೆಸಿದರು.ಈ ಸಂದರ್ಭ ದೇವಳದ ಅರ್ಚಕರು,ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗ್ಯಾಸ್ ಟ್ಯಾಂಕರ್ ಗೆ ತೂಫಾನ್ ಕ್ರೂಸ್‌ರ್ ಡಿಕ್ಕಿ,10 ಮಂದಿಗೆ ಗಾಯ

ಬೈಂದೂರು:ರಾಷ್ಟ್ರೀಯ ಹೆದ್ದಾರಿ 66 ರ ವತ್ತಿನೆಣೆ ಬಳಿ ತೂಫಾನ್ ಕ್ರೂಸರ್ ಗಾಡಿ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ ಘಟನೆ ಬುಧವಾರ ನಡೆದಿದೆ.ಅಪಘಾತದಲ್ಲಿ ತೂಫಾನ್ ಕ್ರೂಸರ್ ನಲ್ಲಿದ್ದ ಹತ್ತು ಮಂದಿಗೆ ಗಾಯಗಳಾಗಿದ್ದು ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗ್ಯಾಸ್ ಟ್ಯಾಂಕರ್ ಕಾಸರಗೋಡು ಕಡೆಗೆ ಚಲಿಸುತ್ತಿದ್ದು ತೂಫಾನ್ ಕ್ರೂಸರ್ ಹುಬ್ಬಳ್ಳಿ ಮೂಲದವರು ಎನ್ನಲಾಗಿದೆ.ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಕಾರ್ತಿಕ ಮಾಸದ ದೀಪೋತ್ಸವ

ಬೈಂದುರು:ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಡಾಕೆರೆಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಸಣ್ಣಕಳ್ಳಿ ಮನೆ ಕುಟುಂಬಸ್ಥರು ಹಾಗೂ ಊರಿನ ಗ್ರಾಮಸ್ಥರ ಸಯೋಗದೊಂದಿಗೆ ವೈಭವದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಬುಧವಾರ ಸಂಭ್ರಮದಿಂದ ನಡೆಯಿತು.ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಸುತ್ತಲೂ ಹೂವಿನ ಅಲಂಕಾರ ಮಾಡಲಾಯಿತು ಹಾಗೂ ವಿದ್ಯುತ್ ದೀಪಾಗಳಿಂದ ಸಿಂಗಾರಿಸಲಾಯಿತು,ಹಣತೆ ದೀಪಗಳನ್ನು ಹಚ್ಚಲಾಗಿತ್ತು.ದೇವಸ್ಥಾನದ ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಹೊಳ್ಳ ವಕ್ಕೇರಿ ಬಡಾಕೆರೆ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸಾನಿಧ್ಯದಲ್ಲಿ ಸಂಪನ್ನಗೊಂಡಿತ್ತು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು […]

You cannot copy content of this page