ನಿವೃತ್ತ ಆರೋಗ್ಯ ಕಾರ್ಯಕರ್ತೆ ಸರಳಗೆ ಸನ್ಮಾನ

ಕುಂದಾಪುರ:ನೂಜಾಡಿ ಹಾಗೂ ಹಕ್ಲಾಡಿ ಗ್ರಾಮದಲ್ಲಿ 40 ವರ್ಷಗಳಿಂದ ಆರೋಗ್ಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ,ಸೇವಾ ನಿವೃತ್ತಿ ಹೊಂದಿರುವ ಹಿರಿಯ ಆರೋಗ್ಯ ಕಾರ್ಯಕರ್ತೆ ಸರಳಾ ಅವರನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-1 ವತಿಯಿಂದ ಸನ್ಮಾನಿಸಲಾಯಿತು.ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ವೀಣಾರಾಣಿ,ಹಕ್ಲಾಡಿ ಪಂಚಾಯಿತಿ ಸದಸ್ಯ ಪ್ರವೀಣ ಶೆಟ್ಟಿ,ಸುದೇಶ,ಅಂಗನವಾಡಿ ಕಾರ್ಯಕರ್ತೆ ದೀಪಾ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು,ವಂದಿಸಿದರು.

ಉಪ್ಪುಂದ:ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವ

ಕುಂದಾಪುರ:ಬೈಂದೂರು ತಾಲೂಕಿನ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪ್ರಸಾದ ಸ್ವೀಕರಿಸಿದರು. ಕೋಟೇಶ್ವರದ ’ಕೊಡಿ’ ಹಬ್ಬದ ಮಾರನೇಯ ದಿನದಂದು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೊಡಿ ಹಬ್ಬ ನಡೆಯುತ್ತದೆ.ಬೈಂದೂರು ಹಾಗೂ ಉಪ್ಪುಂದ ಭಾಗದ ಜನರು ’ಉಪ್ಪುಂದದ ಕೊಡಿ ಹಬ್ಬ’ ಎಂದು ಕರೆಯುವ ಸಂಪ್ರದಾಯವಿದೆ.ಹೊಸ ಮದುಮಕ್ಕಳು ಹಾಗೂ ಸಂತಾನ ಭಾಗ್ಯಕ್ಕಾಗಿ ಹರಕೆ ಹೊತ್ತುಕೊಳ್ಳುವವರು ಹಬ್ಬದ ದಿನದಂದು ಶ್ರೀ ದೇವಿಯ ದರ್ಶನ ಮಾಡಿ […]

ಡಿ.3ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಾವುಂದದಲ್ಲಿ ನಡೆಯಲಿದೆ

ಕುಂದಾಪುರ:ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟ್ ಮಂಗಳೂರು, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಆಶ್ರಯದಲ್ಲಿ,ಉಡುಪಿ ಆದರ್ಶ ಆಸ್ಪತ್ರೆ ಸಹಯೋಗದಲ್ಲಿ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಡಿ.3ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ರಾಜು ಪೂಜಾರಿ ಮಾತನಾಡಿ,ಶಿಬಿರಕ್ಕೆವೈದ್ಯಕೀಯ ತಜ್ಞ ಡಾ.ಜಿ.ಎಸ್‌.ಚಂದ್ರಶೇಖರ, ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಎ.ರಾಜಾ ಸೇರಿದಂತೆ 25ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗವಹಿಸಲಿದ್ದಾರೆ ಆರೋಗ್ಯ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು […]

You cannot copy content of this page