ಆಲೂರು:ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆ

ಕುಂದಾಪುರ:ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ಭಾರತೀಯ ಚುನಾವಣಾ ಆಯೋಗದ ವತಿಯಿಂದ ನಡೆದ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಬೈಂದೂರು ವಲಯದ ಆಲೂರು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಗ್ರೀಷ್ಮಾ ಮತ್ತು ಪ್ರಜ್ಞಾ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಶಿಕ್ಷಕ ಉದಯ ಕುಮಾರ್ ಶೆಟ್ಟಿ ತರಬೇತಿ ನೀಡಿದ್ದರು.ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯದ ಮುವತ್ತೇರಡು ಶೈಕ್ಷಣಿಕ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಹೊಸಾಡು:ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಕುಂದಾಪುರ:ತಾಲೂಕಿನ ಬೈಂದೂರು ವಿಧಾನ ಸಭಾ ಕ್ಷೇತ್ರದ ಹೊಸಾಡು ಗ್ರಾಮದ ಹುಣ್ಸೆಬೆಟ್ಟಿನ ಎಸ್.ಸಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಮುಂಬರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಕೆ ಮಾಡಿದ್ದಾರೆ.ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆಮಕ್ಕಿ ಕ್ರಾಸ್ ನಿಂದ ಹುಣ್ಸೆಬೆಟ್ಟಿನ ಎಸ್.ಸಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸುಮಾರು 1 ಕಿ.ಮೀ ವರೆಗಿನ ಮಣ್ಣಿನ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಕಳೆದ 6 ವರ್ಷಗಳಿಂದ ಕಾಲೋನಿ ನಿವಾಸಿಗಳು ನೀಡಿರುವ ಹಲವು ಮನವಿಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದನೆ ಮಾಡದೆ ಇದ್ದಿದ್ದರಿಂದ […]

ಹೋಮ ಯಾಗದಲ್ಲಿ ಭಾಗಿಯಾದ ವಾನರ ರೂಪಿ ಹನುಮ

ಬೆಂಗಳೂರು:ಗದಗ ಜಿಲ್ಲೆ ಲಕ್ಷ್ಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ನಡೆದ ಹೋಮ ಯಾಗದಲ್ಲಿ ವಾನರ ರೂಪಿ ಹನುಮ ಭಾಗಿಯಾಗಿದ್ದಾನೆ.ರಾಮ ಪ್ರಾಣ ಪ್ರತಿಷ್ಠಾಪನೆ ದಿನದ ಅಂಗವಾಗಿ ಯಾಗ ಆಯೋಜಿಸಲಾಗಿತ್ತು.ಆ ವೇಳೆ ಪ್ರತ್ಯಕ್ಷನಾದ ಕೋತಿ ಯಾಗ ವಿಧಿಗಳನ್ನ ವೀಕ್ಷಿಸುತ್ತ ಕುಳಿತಿದೆ. ಗದಗದ ಯೋಗ ತಂಡದಿಂದ ದೇವಸ್ಥಾನದಲ್ಲಿ ಅಗ್ನಿಹೋತ್ರ ಹೋಮ ಆಯೋಜಿಸಲಾಗಿತ್ತು. ಹೋಮ ಆರಂಭವಾಗುತ್ತಿದ್ದಂತೆ ಕೋತಿ ಸ್ಥಳಕ್ಕೆ ಹಾಜರಾಗಿದೃ.ಸುತ್ತಲು ಜನ ಕೂತಿದ್ದರೂ ಯಾಗದ ಸ್ಥಳಕ್ಕೆ ದೌಡಾಯಿಸಿದ ವಾನರ ಕೆಲವು ಸಮಯದ ವರೆಗೆ ಪೂಜೆಯಲ್ಲಿ ಪಾಲ್ಗೊಂಡಿತ್ತು.

You cannot copy content of this page